ಕೊಪ್ಪಳ:ಸಿದ್ದರಾಮಯ್ಯ ಗರತಿ ರಾಜಕಾರಣಿಯಲ್ಲ. ಅವರು ಗರತಿ ರಾಜಕಾರಣ ಮಾಡಿದ್ರೆ ಪಕ್ಷಾಂತರ ಮಾಡುತ್ತಿದ್ರಾ? ಎಂದು ಕನ್ನಡ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಗರತಿ ರಾಜಕಾರಣಿಯಲ್ಲ : ಸಿ. ಟಿ ರವಿ ವ್ಯಂಗ್ಯ - ಕೊಪ್ಪಳ ಗವಿಮಠ ಸಿ ಟಿ ರವಿ ಸಿದ್ದರಾಮಯ್ಯ ಕುರಿತ ಹೇಳಿಕೆ ಸುದ್ದಿ
ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್ ಈಗ ಸತ್ತು ಹೋಗಿದೆ. ಗಾಂಧಿ ಕಾಂಗ್ರೆಸ್ ಅಂದರೆ ಗೋಹತ್ಯೆ ನಿಷೇಧ, ಭ್ರಷ್ಟಾಚಾರ ಮುಕ್ತ ಮಾಡುವ ಧ್ಯೇಯ ಹೊಂದಿತ್ತು. ಆದರೆ ಈಗಿರುವ ಕಾಂಗ್ರೆಸ್ ಇದೆಲ್ಲದರ ಪರವಾಗಿರುವ ಪಕ್ಷ. ದೇಶಕ್ಕೆ ಕಾಂಗ್ರೆಸ್ ಅಂಟಿದ ಮುಳ್ಳಾಗಿದೆ ಎಂದು ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಚೆಲುವರಾಯಸ್ವಾಮಿ, ಇಕ್ಬಾಲ್ ಅನ್ಸಾರಿ, ಬಾಲಕೃಷ್ಟರನ್ನು ಕರೆಸಿಕೊಂಡರಲ್ಲ, ಇದೇನು? ಇವರನ್ನೆಲ್ಲಾ ಪಕ್ಷಾಂತರ ಮಾಡಿಸಿದ್ದು ಗರತಿ ರಾಜಕಾರಣನಾ? ಸಿದ್ದರಾಮಯ್ಯನಿಗೆ ಯಾವ ಆದರ್ಶ, ನೈತಿಕತೆ ಇದೆ ಎಂದುಸಚಿವ ಸಿ.ಟಿ. ರವಿ, ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅಂಟಿದ ಮುಳ್ಳು. ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ಈಗ ಸತ್ತು ಹೋಗಿದೆ. ಗಾಂಧಿ ಕಾಂಗ್ರೆಸ್ ಅಂದರೆ ಗೋಹತ್ಯೆ ನಿಷೇಧ, ಭ್ರಷ್ಟಾಚಾರ ಮುಕ್ತ ಮಾಡುವ ಧ್ಯೇಯ ಹೊಂದಿತ್ತು. ಆದರೆ, ಈಗಿರುವ ಕಾಂಗ್ರೆಸ್ ಇದೆಲ್ಲದರ ಪರವಾಗಿರುವ ಪಕ್ಷ. ದೇಶಕ್ಕೆ ಕಾಂಗ್ರೆಸ್ ಅಂಟಿದ ಮುಳ್ಳಾಗಿದೆ. ಹೀಗಾಗಿ ಆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ಹೇಳಿದರು. ಇನ್ನು ಯಡಿಯೂರಪ್ಪ ನಮ್ಮ ಸರ್ವಾನುಮತದ ಆಯ್ಕೆ. ಆದರೆ, ಸಿದ್ದರಾಮಯ್ಯರದ್ದು ವಿವಾದಾತ್ಮಕ ಆಯ್ಕೆ ಎಂದು ಸಚಿವ ಸಿ. ಟಿ. ರವಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.