ಕರ್ನಾಟಕ

karnataka

ಸಾಮಾಜಿಕ ಅಂತರಕ್ಕೆ ಬ್ರೇಕ್...ನೂಕು ನುಗ್ಗಲಿನಲ್ಲಿ ಬ್ಯಾಂಕ್​ಗೆ ಮುಗಿಬಿದ್ದ ಜನ

By

Published : Apr 7, 2020, 6:27 PM IST

ಕೊರೊನಾ ಕಂಟ್ರೋಲ್ ಮಾಡಲು ಇಡೀ ದೇಶವೇ ಲಾಕ್​​​ಡೌನ್ ಆಗಿದೆ. ಆದ್ರೆ ಕೊಪ್ಪಳ ನಗರದಲ್ಲಿ ಜನರು ಕ್ಯಾರೆ ಎನ್ನದೇ ಬ್ಯಾಂಕ್​​ಗಳ ಮುಂದೆ ಗುಂಪು ಗುಂಪಾಗಿ ನಿಂತಿದ್ದು, ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ.

Break the social gap..people rushed to the bank without the social distance
.ನೂಕುನುಗ್ಗಲಿನಲ್ಲಿ ಬ್ಯಾಂಕ್​ಗೆ ಮುಗಿಬಿದ್ದ ಜನ

ಕೊಪ್ಪಳ: ಕೊರೊನಾ ಕಂಟ್ರೋಲ್ ಮಾಡಲು ಈಗಿರುವ ಅತ್ಯಂತ ಸೂಕ್ತ ಮಾರ್ಗ ಎಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಆದರೆ ಇದನ್ನ ಗಣನೆಗೆ ತೆಗೆದುಕೊಳ್ಳದಂತೆ ಜಿಲ್ಲೆಯ ಜನ ವರ್ತಿಸಿದ್ದು, ಜನ್ ಧನ್ ಖಾತೆಗೆ ಬಂದಿರುವ ಹಣ ಪಡೆಯಲು ಬ್ಯಾಂಕ್ ಮುಂದೆ ಮುಗಿ ಬಿದ್ದಿದ್ದಾರೆ.

ನೂಕುನುಗ್ಗಲಿನಲ್ಲಿ ಬ್ಯಾಂಕ್​ಗೆ ಮುಗಿಬಿದ್ದ ಜನ

ಕೊರೊನಾ ಕಂಟ್ರೋಲ್ ಮಾಡಲು ಇಡೀ ದೇಶವೇ ಲಾಕ್​​​ಡೌನ್ ಆಗಿದೆ. ನಗರದಲ್ಲಿ ಜನರು ಲಾಕ್​​​ಡೌನ್ ಗೆ ಕ್ಯಾರೆ ಎನ್ನದೇ ಗುಂಪು ಗುಂಪಾಗಿ ನಿಲ್ತಿದ್ದಾರೆ. ಜನಧನ್ ಯೋಜನೆ, ಕಾರ್ಮಿಕರ ಕಾರ್ಡ್ ಹಣ, ಗ್ಯಾಸ್ ಸಬ್ಸಿಡಿ ಹಣ ಡ್ರಾ ಮಾಡಲು ನಗರದ ಯೂನಿಯನ್ ಬ್ಯಾಂಕ್ ಮುಂದೆ ಜನರು ಮುಗಿಬಿದ್ದಿದ್ದರು.

ಸಾಮಾಜಿಕ ಅಂತರವನ್ನು ಮರೆತು ಬ್ಯಾಂಕ್ ಮುಂದೆ ಗುಂಪು ಗುಂಪಾಗಿ ನಿಂತುಕೊಂಡಿರುವ ದೃಶ್ಯ ಇಂದು ಕಂಡು ಬಂತು. ಅಲ್ಲದೇ ತಮ್ಮ ಜೊತೆಗೆ ಪುಟ್ಟಪುಟ್ಟ ಮಕ್ಕಳನ್ನು ಕರೆದುಕೊಂಡು ಬ್ಯಾಂಕ್ ಮುಂದೆ ಬಂದು ನಿಂತ ಜನರಿಗೆ ಬುದ್ದಿ ಹೇಳುವಲ್ಲಿ ಬ್ಯಾಂಕ್ ಸಿಬ್ಬಂದಿ ಸಹ ವಿಫಲವಾಗಿದ್ದು ಕಂಡು ಬಂದಿತು.

ABOUT THE AUTHOR

...view details