ಕೊಪ್ಪಳ:ಒಬ್ಬ ಸಾಮಾನ್ಯ ಕಾರ್ಯಕರ್ತನೂ ಸಹ ಶಾಸಕ, ಸಂಸದ, ಪಕ್ಷದ ಅಧ್ಯಕ್ಷರಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ. ಇದು ಬಿಜೆಪಿ ಪಕ್ಷದ ವೈಶಿಷ್ಟ್ಯತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಾರಿದರು.
ನಗರದ ಶಿವಶಾಂತ ಮಂಗಲಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ಯಾರು ವೇದಿಕೆಯ ಮೇಲಿರಬೇಕು, ಯಾರು ಕೆಳಗೆ ಇರಬೇಕು ಎಂಬುದನ್ನು ನಾನು ತೀರ್ಮಾನಿಸುತ್ತೇನೆ. ಉದ್ಧಟತನ ಮಾಡಿದರೆ ಪಕ್ಷದ ರಾಜ್ಯಧ್ಯಕ್ಷನಾಗಿ ಏನು ಕ್ರಮ ತೆಗೆದುಕೊಳ್ಳಬೇಕೋ ಆ ಕೆಲಸವನ್ನು ನಾನು ಮಾಡುತ್ತೇನೆಂದು ಖಡಕ್ ಎಚ್ಚರಿಕೆ ನೀಡಿದರು.
ಸಾಮಾನ್ಯ ಕಾರ್ಯಕರ್ತ ಸಹ ಉನ್ನತ ರಾಜಕಾರಣಿಯಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ : ನಳಿನ್ ಕುಮಾರ್ ಕಟೀಲ್ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವದಲ್ಲಿ ನಂಬಿಕೆ ಇಟ್ವವನು ನಾನು. ಅಖಂಡ ಭಾರತ ದೇಶಕ್ಕಾಗಿ ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಪಡಿಸಿದ್ದಾರೆ. ಕಾಶ್ಮೀರವನ್ನು ಉಳಿಸಿಕೊಳ್ಳುವ ಕೆಲಸವನ್ನು ಅವರು ಮಾಡಿದ್ದಾರೆ. ಮೋದಿ-ಅಮಿತ್ ಶಾ ಜೋಡಿ ಹಾಗೂ ಅಟಲ್ ಬಿಹಾರಿ ವಾಜಪೇಯಿ - ಅಡ್ವಾನಿ ಜೋಡಿ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎನ್ನುವ ಕಾಂಗ್ರೆಸ್, ಮಹಾತ್ಮ ಗಾಂಧೀಜಿಯ ತತ್ವಗಳನ್ನು, ಸಿದ್ಧಾಂತಗಳನ್ನು ಗಾಳಿಗೆ ತೂರಿದೆ. ಬಿಜೆಪಿ ರಾಮನ ಹೆಸರು ಹೇಳಿದರೆ ಕಾಂಗ್ರೆಸ್ನವರು ಕೋಮುವಾದಿ ಎನ್ನುತ್ತಾರೆ ಎಂದು ಆರೋಪಿಸಿದರು.