ಕರ್ನಾಟಕ

karnataka

ETV Bharat / state

ಜಮೀರ್​ಗೆ ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಅಂತಾ ಪ್ರಚಾರ ಮಾಡಲು ಹೇಳಿರಬಹುದು: ಬಿ ಸಿ ಪಾಟೀಲ್​ - ಕೊಪ್ಪಳದಲ್ಲಿ ಬಿ,ಸಿ ಪಾಟೀಲ್​

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆ ವಿಷಯ ನನಗೆ ಸಂಬಂಧಿಸಿದ್ದಲ್ಲ. ಹೀಗಾಗಿ ನಾನು ಏನು ಹೇಳಲಿ ಎಂದು ಎನ್ನುತ್ತಲೇ ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್​ಗೆ ಟಾಂಗ್ ನೀಡಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್
ಕೃಷಿ ಸಚಿವ ಬಿ.ಸಿ. ಪಾಟೀಲ್

By

Published : Jun 19, 2021, 3:38 PM IST

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್​ಗೆ ಮುಂದಿನ ಸಿಎಂ ನಾನೇ ಎಂದು ಪ್ರಚಾರ ಮಾಡಲು ಹೇಳಿರಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕಾಗಿ ಈಗಲೇ ಕಾಂಗ್ರೆಸ್​ನಲ್ಲಿ ಪೈಪೋಟಿ ಶುರುವಾಗಿದೆ. ಅವರ ತಟ್ಟೆಯಲ್ಲೇ ಕತ್ತೆ ಬಿದ್ದಿದೆ. ಅವರು ಇನ್ನೇನು ಬಿಜೆಪಿ ಬಗ್ಗೆ ಮಾತಾಡ್ತಾರೆ ಎಂದು ಕುಟುಕಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆ ಕುರಿತಂತೆ, ನೀವು ಜಮೀರ್ ಅಹ್ಮದ್ ಅಥವಾ ಡಿಕೆಶಿ ಅವರನ್ನು ಕೇಳಿ. ನಾನು ಬಿಜೆಪಿಯಲ್ಲಿದ್ದೇನೆ. ನಾನು ಕಾಂಗ್ರೆಸ್ ನಾಯಕ ಅಲ್ಲ. ಕಾಂಗ್ರೆಸ್ ಒಳ ಹೊರಗಿನ ಬಗ್ಗೆ ನಾನೇನು ಮಾತನಾಡಲಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸಿಎಂ ಆಗಬೇಕು ಎಂದರೆ ಆ ಪಕ್ಷಕ್ಕೆ ಮೊದಲು ಬಹುಮತ ಬರಬೇಕಲ್ಲಾ. ಚುನಾವಣೆಗೆ ಇನ್ನೂ 2 ವರ್ಷವಿದೆ. ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುವುದು ಬೇಡ. ಸದ್ಯ ಈ ಪ್ರಶ್ನೆಯೇ ಬರುವುದಿಲ್ಲ. ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈಗಲೇ ಅವರು ಹಗಲುಗನಸು ಕಾಣುವುದು ಬೇಡ ಎಂದು ಕಾಂಗ್ರೆಸ್​ಗೆ ಸಚಿವ ಬಿ ಸಿ ಪಾಟೀಲ್​ ಟಾಂಗ್ ‌ನೀಡಿದ್ದಾರೆ.

ಓದಿ:ಮುಖ್ಯಮಂತ್ರಿ ಆದಿಯಾಗಿ ಇಡೀ ಸರ್ಕಾರವೇ ನಮ್ಮ ಮರ್ಜಿಯಲ್ಲಿದೆ : ಹೆಚ್ ವಿಶ್ವನಾಥ್ ಗುಟುರು

ABOUT THE AUTHOR

...view details