ಕರ್ನಾಟಕ

karnataka

ETV Bharat / state

ವಾಟ್ಸಪ್​ ಮೂಲಕ ಸಂದೇಶ ರವಾನಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಸ್ನೇಹಿತರಿಂದ ರಕ್ಷಣೆ - ಆತ್ಮಹತ್ಯೆ

ಮಹಾಂತೇಶ್ ಗ್ರೂಪ್​ನಲ್ಲಿ ಮಾಡಿದ್ದ ಮೆಸೇಜ್ ನೋಡಿ ಸ್ನೇಹಿತರು ಗಾಬರಿಗೊಂಡು ಆತನ‌ ಮನವೊಲಿಸುವ ಮೆಸೇಜ್​ಗಳನ್ನು ಮಾಡಿದ್ದಾರೆ. ಅಲ್ಲದೆ, ನಾಲ್ಕೈದು ಸ್ನೇಹಿತರು ಮಹಾಂತೇಶನಿಗಾಗಿ ಹುಡುಕಾಟ‌ ನಡೆಸಿ ಪತ್ತೆ ಹಚ್ಚಿದ್ದಾರೆ.

ಆತ್ಮಹತ್ಯೆಗೆ ಯತ್ನ

By

Published : Feb 9, 2019, 12:14 PM IST

ಕೊಪ್ಪಳ:ವಾಟ್ಸಪ್ ಮೂಲಕ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಮುಂದಾಗಿದ್ದ ವ್ಯಕ್ತಿಯನ್ನು ಆತನ ಸ್ನೇಹಿತರು ರಕ್ಷಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದ ಮಹಾಂತೇಶ ಎಂಬಾತನನ್ನು ಆತನ ಸ್ನೇಹಿತರು ರಕ್ಷಿಸಿ ಮರಳಿ ಗ್ರಾಮಕ್ಕೆ ಕರೆತಂದಿದ್ದಾರೆ.

ಆತ್ಮಹತ್ಯೆಗೆ ಯತ್ನ

ಬೆಂಗಳೂರಿನಲ್ಲಿದ್ದ ಮಹಾಂತೇಶ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಕುಷ್ಟಗಿಯ ಡಿ.ಹೆಚ್.ಪಾಟೀಲ್ ಅಭಿಮಾನಿಗಳ ವಾಟ್ಸಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿದ್ದ. ಮಹಾಂತೇಶ್ ಗ್ರೂಪ್​ನಲ್ಲಿ ಮಾಡಿದ್ದ ಮೆಸೇಜ್ ನೋಡಿ ಸ್ನೇಹಿತರು ಗಾಬರಿಗೊಂಡು ಆತನ‌ ಮನವೊಲಿಸುವ ಮೆಸೇಜ್​ಗಳನ್ನು ಮಾಡಿದ್ದಾರೆ. ಅಲ್ಲದೆ, ನಾಲ್ಕೈದು ಸ್ನೇಹಿತರು ಮಹಾಂತೇಶನಿಗಾಗಿ ಹುಡುಕಾಟ‌ ನಡೆಸಿ ಪತ್ತೆ ಹಚ್ಚಿದ್ದಾರೆ.

ರಕ್ಷಣೆ

ಬಳಿಕ ಮಹಾಂತೇಶನ ಮನವೊಲಿಸಿ ಕುಷ್ಟಗಿ ತಾಲೂಕಿನ ಸ್ವಗ್ರಾಮ ಕೊರಡಕೇರಾಗೆ ವಾಪಾಸ್ ಕರೆತರುವ ಮೂಲಕ ರಕ್ಷಣೆ ಮಾಡಿದ್ದಾರೆ. ಮಹಾಂತೇಶ್ ಆತ್ಮಹತ್ಯೆಯ ನಿರ್ಧಾರ ಯಾಕೆ‌ ಮಾಡಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

...view details