ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ... ಕೊಪ್ಪಳ ಜಿಲ್ಲೆಯಲ್ಲಿ 550 ಹಾಸಿಗೆ ಸಿದ್ಧ

ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗೆ ಒಟ್ಟು 550 ಹಾಸಿಗೆಗಳನ್ನು ಸಿದ್ದ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Koppala
ಲ್ಲಾಧಿಕಾರಿ ವಿಕಾಸ್ ಕಿಶೋರ ಸುರಾಳ್ಕರ್

By

Published : Aug 7, 2020, 8:50 PM IST

ಗಂಗಾವತಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಮಾಡಲು ಖಾಸಗಿ ವಲಯದಿಂದ 300 ಹಾಗೂ ಸರ್ಕಾರದಿಂದ 250 ಒಟ್ಟು 550 ಹಾಸಿಗೆಗಳನ್ನು ಸಿದ್ಧ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಾಳ್ಕರ್ ಹೇಳಿದರು.

ನಗರಕ್ಕೆ ಭೇಟಿ ನೀಡಿದ ಅವರು, ಕೊಪ್ಪಳದಲ್ಲಿ 150 ಹಾಗೂ ಗಂಗಾವತಿಯಲ್ಲಿ 150 ಒಟ್ಟು ಖಾಸಗಿ ವಲಯದಿಂದ 300 ಹಾಸಿಗೆಗಳನ್ನು ನೀಡುವಂತೆ ಗುರಿ ನಿಗಧಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರದಿಂದ ಸದ್ಯಕ್ಕೆ 238 ಇದೆ.

ಸರ್ಕಾರದ ಬೆಡ್​ಗಳ ಪ್ರಮಾಣವನ್ನು 250ರ ಆಚೀಚೆ ಒಯ್ಯಬಹುದು. ಸರ್ಕಾರದಿಂದ 250 ಹಾಗೂ ಖಾಸಗಿ ಆಸ್ಪತ್ರೆಗಳಿಂದ 300 ಒಟ್ಟು ಕೊಪ್ಪಳ ಜಿಲ್ಲೆಯಲ್ಲಿ 550 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ಬದಲಾದ ಗೈಡ್ಲೈನ್ ಪ್ರಕಾರ ಹೋಂ ಐಸೋಲೆಷನ್​ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜಿಲ್ಲೆಯಲ್ಲಿ ಅಗತ್ಯ ಎನಿಸಿದರೆ ಎರಡು ಸಾವಿರ ಬೆಡ್ ಸಿದ್ಧಪಡಿಸುವ ಅವಕಾಶವಿದೆ. ಆದರೆ ಸದ್ಯಕ್ಕೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

ABOUT THE AUTHOR

...view details