ಕೊಪ್ಪಳ:ಜಿಲ್ಲೆಯಲ್ಲಿ ನಿನ್ನೆ 456 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 8 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ- 117, ಗಂಗಾವತಿ- 180, ಕುಷ್ಟಗಿ- 67 ಹಾಗೂ ಯಲಬುರ್ಗಾ- 92 ಪ್ರಕರಣ ಸೇರಿ ಒಟ್ಟು 456 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 27,850ಕ್ಕೆ ಏರಿದೆ. 8 ಜನ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಈವರೆಗೆ ಒಟ್ಟು 461 ಮಂದಿ ಮೃತಪಟ್ಟಿದ್ದಾರೆ.