ಗಂಗಾವತಿ: ತಾಲೂಕಿನ ದಾಸನಾಳ ಸಮೀಪದ ರೈಸ್ ಮಿಲ್ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆಯ ಅಧಿಕಾರಿಗಳು ಒಟ್ಟು ಏಳು ಲಕ್ಷಕ್ಕೂ ಅಧಿಕ ಮೌಲ್ಯದ 87 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಗಂಗಾವತಿಯಲ್ಲಿ ರೈಸ್ ಮಿಲ್ ಮೇಲೆ ದಾಳಿ: 387 ಕ್ವಿಂಟಾಲ್ ಅಕ್ಕಿ ಸೀಜ್ - Manjunatha Rice Mill of Gangavati
ಕೊಪ್ಪಳ ಜಿಲ್ಲಾಧಿಕಾರಿ ಮಾರ್ಗದರ್ಶನದ ಮೇರೆಗೆ ಗಂಗಾವತಿ ತಾಲೂಕಿನ ದಾಸನಾಳ ಸಮೀಪದ ರೈಸ್ ಮಿಲ್ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಪಡಿತರ ಅಕ್ಕಿ ಸೀಜ್ ಮಾಡಿದ್ದಾರೆ.
387 ಕ್ವಿಂಟಾಲ್ ಪಿಡಿಎಸ್ ಅಕ್ಕಿ ಸೀಜ್
ಮಂಜುನಾಥ ರೈಸ್ ಮಿಲ್ನಲ್ಲಿ ಕಂದು ಬಣ್ಣದ ಅಕ್ಕಿಯ 50 ಕೆಜಿಯ 124 ಚೀಲ, ರೂ. 86,800 ಮೌಲ್ಯ, ಕೋಳಿ ನುಚ್ಚು 40 ಕೆಜಿಯ 124 ಚೀಲ 17,300 ರೂ. ಮೌಲ್ಯ, ಡಬಲ್ಗೋಡಾ 100 ವೈಟ್ ಬ್ರೋಕನ್ ಎಂಬ ರೈಸ್ 50 ಕೆಜಿಯ 775 ಚೀಲ 5.42 ಲಕ್ಷ ರೂ. ಮೌಲ್ಯದ ಸರಕು ವಶಕ್ಕೆ ಪಡೆದಿದ್ದಾರೆ.
ಇದರ ಮಾರುಕಟ್ಟೆ ಮೌಲ್ಯ 7.06 ಲಕ್ಷ ಎಂದು ದೂರಿನಲ್ಲಿ ವಿವರಿಸಲಾಗಿದೆ. ಮಿಲ್ ಮಾಲೀಕ, ಸುರೇಶ, ಕಾಳಪ್ಪ ಹಾಗೂ ಸಿದ್ದಣ್ಣ ಎಂಬುವವರ ಮೇಲೆ ಗ್ರಾಮೀಣ ಠಾಣೆಯಲ್ಲಿ ಆಹಾರ ಶಿರಸ್ತೇದಾರ್ ದೇವರಾಜ್ ದೂರು ದಾಖಲಿಸಿದ್ದಾರೆ.