ಗಂಗಾವತಿ:ಕಳೆದ ಮೂರು ತಿಂಗಳ ಹಿಂದಷ್ಟೆ ನೀರಾವರಿ ಇಲಾಖೆ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಸುಮಾರು 3.5 ಕೋಟಿ ರೂ. ಮೊತ್ತದ ಕಾಂಕ್ರೀಟ್ ಕಾಮಗಾರಿ ನೀರುಪಾಲಾಗಿದೆ.
ಹೀಗಾಗಿ ಸಾಕಷ್ಟು ನೀರು ಹೊಲಕ್ಕೆ ನುಗ್ಗಿ ಭತ್ತ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ಗುಂಡೂರು ಮತ್ತು ಹುಳ್ಕಿಹಾಳ ಗ್ರಾಮದ ಸುಮಾರು ಮೂರು ಸಾವಿರ ಹೆಕ್ಟೇರ್ ಪ್ರದೇಶದ ಭತ್ತದ ಬೆಳೆಯೂ ಹಾಳಾಗಿದೆ.
ಕೋಟಿ ಕೋಟಿ ಮೊತ್ತದ ಕಾಮಗಾರಿ ಮೂರೇ ತಿಂಗಳಲ್ಲಿ ಜಲಹೋಮ ಕಳೆದ ಮೂರು ತಿಂಗಳ ಹಿಂದಷ್ಟೆ ಈ ಕಾಮಗಾರಿ ಕೈಗೊಳ್ಳಲಾಗಿತ್ತು. ಕಳಪೆ ಕಾಮಗಾರಿ ಮತ್ತು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೀಗಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ರೈತರೇ ಈ ಭಾಗದಲ್ಲಿ ಹಲವು ಕಾಮಗಾರಿ ಮಾಡಿಕೊಂಡಿದ್ದರು. ಆ ಕಾಮಗಾರಿ ಎಂದೂ ಈ ರೀತಿಯಾಗಿರಲಿಲ್ಲ ಎಂದು ರೈತ ಈರಪ್ಪ ಸತ್ಯನಾರಾಯಣ ಹೇಳಿದ್ದಾರೆ.
ಕಾಲುವೆಯ ಸಹಾಯಕ ಎಂಜಿನಿಯರ್ ಸೂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತು ಹೋಗಿರುವ ಕಾಲುವೆಯ ಸ್ಥಳಕ್ಕೆ ಕಪ್ಪು ಮಣ್ಣು ಹಾಕಿ, ನೀರು ಹೊಲಕ್ಕೆ ನುಗ್ಗದಂತೆ ಕ್ರಮ ಕೈಗೊಂಡಿದ್ದಾರೆ.