ಕರ್ನಾಟಕ

karnataka

ETV Bharat / state

ಗಂಗಾವತಿ: ಜನಾರ್ದನ ರೆಡ್ಡಿ ಪಕ್ಷಕ್ಕೆ ಜಿಗಿದ 13 ಮಂದಿ ನಗರಸಭೆ ಸದಸ್ಯರು - etv bharat kannada

ಜನಾರ್ದನ ರೆಡ್ಡಿ ಪಕ್ಷವಾದ ಕೆಆರ್​ಪಿಪಿಗೆ ಕೆಲವು ನಗರಸಭೆ ಸದಸ್ಯರು ಸೇರ್ಪಡೆಗೊಂಡಿದ್ದಾರೆ.

13-municipal-councilors-join-krpp-party-in-gangavti
ಗಂಗಾವತಿ: ಜನಾರ್ದನ ರೆಡ್ಡಿ ಪಕ್ಷಕ್ಕೆ ಜಿಗಿದ 13 ಜನ ನಗರಸಭೆ ಸದಸ್ಯರು

By

Published : Apr 17, 2023, 9:50 PM IST

Updated : Apr 17, 2023, 11:01 PM IST

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

ಗಂಗಾವತಿ:ವಿಧಾನಸಭೆಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಮುಂದುವರೆದಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 12 ಮತ್ತು ಓರ್ವ ಪಕ್ಷೇತರರೂ ಸೇರಿ ಒಟ್ಟು 13 ಮಂದಿ ನಗರಸಭೆ ಸದಸ್ಯರು ಸೋಮವಾರ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಥಾಪಿತ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೆ ಸೇರಿದರು. ಕನಕಗಿರಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜನಾರ್ದನರೆಡ್ಡಿ ಅವರು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಬೆಂಬಲಿತ ನಗರಸಭೆಯ ಸದಸ್ಯರಾದ ಜರೀನಾ ಬೇಗಂ, ಅಪ್ಸನಾಬೇಗಂ, ಮುಸ್ತಾಕ್ಅಲಿ, ಭೀಮಮ್ಮ, ಮೌಲಸಾಬ್, ಜರೀನಾಬೇಗಂ ಇಸ್ಮಾಯಿಲ್ಸಾಬ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಬೆಂಬಲಿತ ಸದಸ್ಯರಾದ ಬಿಚ್ಚಾಲಿ ಅಜೇಯ್, ರಮೇಶ ಚೌಡ್ಕಿ, ಅನಿತಾ ಶಿವಶಂಕರ್ ಮತ್ತು ಪಕ್ಷೇತರ ಅಭ್ಯರ್ಥಿ ವೆಂಕಟರಮಣ ಕೆಆರ್​ಪಿಪಿ ಸೇರಿದವರು. ಜೆಡಿಎಸ್​ನ ಬಿಚ್ಚುಗತ್ತಿ ಜಬ್ಬಾರ್ ಮತ್ತು ಬಿಚ್ಚುಗತ್ತಿ ಮೊಹಮ್ಮದ್ ಉಸ್ಮಾನ್ ಜೆಡಿಎಸ್ ತೊರೆದು ರೆಡ್ಡಿ ಸಮ್ಮುಖದಲ್ಲಿ ಕೆಆರ್​ಪಿಪಿ ಸೇರಿದ್ದಾರೆ.

ಕಳೆದ 20 ವರ್ಷದಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಿಡಿತದಲ್ಲಿರುವ ಮತ್ತು 35 ವಾರ್ಡ್​ಗಳಿರುವ ನಗರೆಸಭೆಯಲ್ಲಿ ಸದ್ಯ ಕಾಂಗ್ರೆಸ್ ಪಕ್ಷದಿಂದ 17, ಬಿಜೆಪಿ 14 ಹಾಗೂ ಜೆಡಿಎಸ್ 2 ಮತ್ತು ಪಕ್ಷೇತರ ಸದಸ್ಯರು ಎರಡು ವಾರ್ಡ್​ನಲ್ಲಿ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಕಾಂಗ್ರೆಸ್ ಪಕ್ಷದ ಏಳು, ಬಿಜೆಪಿಯ ಮೂರು ಮತ್ತು ಜೆಡಿಎಸ್ ಪಕ್ಷದ ಇಬ್ಬರು ಮತ್ತು ಪಕ್ಷೇತರ ಒಬ್ಬ ಸದಸ್ಯರು ಜನಾರ್ದನ ರೆಡ್ಡಿ ಪಾಳಯಕ್ಕೆ ಜಿಗಿದಿದ್ದಾರೆ. ನಗರಸಭೆಯ ಉಪಾಧ್ಯಕ್ಷೆಯೊಬ್ಬರು ಈಗಾಗಲೇ ಕೆಆರ್​ಪಿಪಿಗೆ ಸೇರಿದ್ದಾರೆ. ಈ ಮೂಲಕ ನಗರಸಭೆಯಲ್ಲಿ ಒಟ್ಟು 14 ಸದಸ್ಯರು ಕೆಆರ್​ಪಿಪಿಗೆ ಸೇರಿದಂತಾಗಿದೆ.

ನಗರಸಭಾ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಜನಾರ್ದನ ರೆಡ್ಡಿ, ಗಂಗಾವತಿಯ ಅಭಿವೃದ್ಧಿಯ ವಿಚಾರವಾಗಿ ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ಸೇರಿದ ನೀವೆಲ್ಲರೂ ನಾನು ಶಾಸಕನಾದ ಮೇಲೆ ನನ್ನೊಂದಿಗೆ ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಮುಖ್ಯವಾಗಿ ನಗರದ ಸೌಂದರ್ಯೀಕರಣ, ಮೂಲ ಸೌಕರ್ಯಗಳ ವಿಸ್ತರಣೆ, ನಿರುದ್ಯೋಗದ ನಿವಾರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ:ಶೆಟ್ಟರ್ ಪಕ್ಷ ಬಿಟ್ಟಿದ್ದು ದುರದೃಷ್ಟಕರ: ಡಾ.ಕೆ.ಸುಧಾಕರ್

Last Updated : Apr 17, 2023, 11:01 PM IST

ABOUT THE AUTHOR

...view details