ಕರ್ನಾಟಕ

karnataka

ETV Bharat / state

ಭಿಕ್ಷಾಟನೆ ತೊರೆದು ಹೈನುಗಾರಿಕೆಯಲ್ಲಿ ಯಶಸ್ವಿಯಾದ ಮಂಗಳಮುಖಿಯರಿವರು

ನಗರದಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದ ಮಂಗಳ ಮುಖಿಯರು, ಇದೀಗ ಈ ವೃತ್ತಿಗೆ ಬ್ರೇಕ್‌ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕೋಲಾರದಲ್ಲಿ ಇವರು ಆರಂಭಿಸಿರುವ ಹೈನುಗಾರಿಕೆ ಇತರರಿಗೆ ಮಾದರಿಯಾಗಿದೆ.

transgender started animal husbandry in kolar
ಭಿಕ್ಷಾಟನೆ ಬಿಟ್ಟು ಹೈನುಗಾರಿಕೆಯಲ್ಲಿ ಯಶಸ್ವಿಯಾದ ಮಂಗಳಮುಖಿಯರಿವರು..

By

Published : Jun 4, 2020, 6:41 PM IST

Updated : Jun 4, 2020, 9:19 PM IST

ಕೋಲಾರ: ನಿತ್ಯ ಬಸ್ ನಿಲ್ದಾಣ, ಜನಸಂದಣಿ ಇರುವ ಪ್ರದೇಶ ಮತ್ತು ಸಂತೆ‌ಗಳಲ್ಲಿ ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದ ಮಂಗಳ ಮುಖಿಯರ ತಂಡವೊಂದು ಭಿಕ್ಷೆಗೆ ಬ್ರೇಕ್‌ ಕೊಟ್ಟು ಹೈನುಗಾರಿಕೆ ಆರಂಭಿಸುವ ಮೂಲಕ ಗಮನ ಸೆಳೆದಿದೆ.

ಕೋಲಾರದ ಹೊರವಲಯದಲ್ಲಿ ಅಶ್ವಿನಿ ರಾಜನ್‌ ಎಂಬುವವರು ತಮ್ಮ ಜೊತೆಗಿದ್ದವರನ್ನು ಒಟ್ಟುಗೂಡಿಸಿಕೊಂಡು ಸಂಕಲ್ಪ ಎಂಬ ಟ್ರಸ್ಟ್​ ಅನ್ನು ಆರಂಭಿಸಿದ್ದಾರೆ. ಕಳೆದ ನವೆಂಬರ್​ನಲ್ಲಿ ಆರಂಭಿಸಿರುವ ಈ ಟ್ರಸ್ಟ್​ ಮೂಲಕ ಇವರಿಗೆ ಸಾಲ ಸೌಲಭ್ಯ ಸಿಕ್ಕಿದೆ. ಸರ್ಕಾರದಿಂದ ಕೆಲವು ಸೌಲಭ್ಯಗಳ ನಿರೀಕ್ಷೆಯಲ್ಲಿರುವ ಇವರು ತಮ್ಮದೇ ಸಂಕಲ್ಪ ಮಾಡಿ ಹೈನುಗಾರಿಕೆ ಮಾಡುತ್ತಿದ್ದಾರೆ. ಮಾತ್ರವಲ್ಲದೇ, ತಮ್ಮದೇ ಬ್ರಾಂಡ್​ನಲ್ಲಿ ವಸ್ತುಗಳನ್ನು ತಯಾರು ಮಾಡಿ ದೇಶ ಗಮನ ಸೆಳೆಯುವ ಕನಸು ಕಟ್ಟಿಕೊಂಡಿದ್ದಾರೆ.

ಭಿಕ್ಷಾಟನೆ ತೊರೆದು ಹೈನುಗಾರಿಕೆಯಲ್ಲಿ ಯಶಸ್ವಿಯಾದ ಮಂಗಳಮುಖಿಯರಿವರು

ಲೈಂಗಿಕ ವೃತ್ತಿಯಲ್ಲೂ ತೊಡಗಿಸಿಕೊಳ್ಳುತ್ತಿದ್ದ ಇವರು ಸಾಕಷ್ಟು ಅವಮಾನ, ಸಂಕಷ್ಟ ಅನುಭವಿಸಿದ್ದಾರೆ. ಒಂದಷ್ಟು ಮಂದಿ ದೃಷ್ಟಿ ತೆಗೆಯೋದು, ಪೂಜೆ ಪುನಸ್ಕಾರಗಳನ್ನು ಮಾಡೋ ಕೆಲಸ ಮಾಡುತ್ತಿದ್ದರು. ಇದೆಲ್ಲದಕ್ಕೂ ಇದೀಗ ಬ್ರೇಕ್‌ ನೀಡಿ ಸ್ವಾವಲಂಬಿ ಜೀವನದತ್ತ ಮುಖ ಮಾಡಿದ್ದಾರೆ.

ಇವರ ಸಂಕಲ್ಪ ಟ್ರಸ್ಟ್​ ಇಂದು ಅದೆಷ್ಟೋ ಮಂಗಳಮುಖಿ ಸಮುದಾಯದವರಿಗೆ ದಾರಿ ದೀಪವಾಗಿದೆ. ಲಾಕ್​ಡೌನ್​ನಿಂದ ಕೆಲಕಾಲ ಎಲ್ಲವೂ ಬಂದ್​ ಆಗಿತ್ತು. ಹೆದ್ದಾರಿ, ಸಭೆ ಸಮಾರಂಭ, ಜಾತ್ರೆಗಳು ಇರಲಿಲ್ಲ, ಜನರ ಓಡಾಟವೇ ಇರದ ಕಾರಣ ಹಲವರು ಇವರ ಬಳಿ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಇಬ್ಬರಿಂದ ಆರಂಭವಾದ ಈ ಮನೆಯಲ್ಲಿ ಇದೀಗ ಹತ್ತು ಮಂದಿ ಇದ್ದಾರೆ.

ಕೀಳಾಗಿ ಕಾಣುತ್ತಿದ್ದವರ ಮುಂದೆ ಇವರು ತಲೆಎತ್ತಿ ಬದುಕುವಷ್ಟು ಉತ್ಸಾಹ ಇವರಲ್ಲಿ ಮೂಡಿದೆ. ಇದೆಲ್ಲವೂ ಒಂದೇ ದಿನದಲ್ಲಿ ಆಗಲಿಲ್ಲ. ಸಾಕಷ್ಟು ದಿನ ಇವರ ಮನ ಪರಿವರ್ತನೆ ಕೌನ್ಸೆಲಿಂಗ್​ ಮಾಡಿಸಿ ಅವರನ್ನು ಸ್ವಾವಲಂಬಿ ಬದುಕಿಗೆ ಕರೆತಂದಿರುವುದು ನಿಜಕ್ಕೂ ಶ್ಲಾಘನೀಯ.

Last Updated : Jun 4, 2020, 9:19 PM IST

ABOUT THE AUTHOR

...view details