ಕೋಲಾರ: ಎಟಿಎಂ ಕಾರ್ಡ್ ಬಳಸಿ ವಂಚಿಸುತ್ತಿದ್ದ ಅಂತರರಾಜ್ಯ ಆರೋಪಿಗಳನ್ನು ಕೋಲಾರದ ಮುಳಬಾಗಿಲು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಟಿಎಂ ಸೆಂಟರ್ಗಳ ಸಮೀಪ ಅಮಾಯಕರ ಬಳಿ ಹಣ ಡ್ರಾ ಮಾಡಿಕೊಡುವುದಾಗಿ ಹಾಗೂ ಪಿನ್ ಪಡೆದು ವಂಚಿಸುತ್ತಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.
ಕೋಲಾರ: ಎಟಿಎಂ ಕಾರ್ಡ್ ಬಳಸಿ ವಂಚಿಸುತ್ತಿದ್ದ ಮೂವರ ಬಂಧನ - ಮುಳಬಾಗಿಲು ನಗರ ಠಾಣೆ ಪೊಲೀಸರು
Kolar police arrested three in cheating case: ಎಟಿಎಂಗಳ ಬಳಿ ಹಣ ಡ್ರಾ ಮಾಡಿಕೊಡುವುದಾಗಿ ಹೇಳಿ ಪಿನ್ ಪಡೆದು ಅಮಾಯಕರನ್ನು ಆರೋಪಿಗಳು ವಂಚಿಸುತ್ತಿದ್ದರು.
Published : Nov 6, 2023, 1:13 PM IST
ತಮಿಳುನಾಡಿನ ಹೊಸೂರು ಮೂಲದ ಮಂಜುನಾಥ್, ಚಿನ್ನದೊರೈ, ಮಂಜುನಾಥ್ ಬಂಧಿತರು. ಇವರಿಂದ 13 ಸಾವಿರ ನಗದು, ನಾಲ್ಕು ಎಟಿಎಂ ಕಾರ್ಡ್ಗಳು, ಒಂದು ಟಿವಿಎಸ್ ಅಪಾಚಿ ಬೈಕ್ ವಶಕ್ಕೆ ಪಡೆಯಲಾಗಿದೆ. ಎಟಿಎಂಗಳ ಬಳಿ ಹಣ ಟ್ರಾ ಮಾಡಿ ಕೊಡುವ ನೆಪದಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಈ ತಂಡ, ಹಲವು ವರ್ಷಗಳಿಂದ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದರು. ಬೆಂಗಳೂರು, ಕೋಲಾರ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದು, ಮೂರು ರಾಜ್ಯದ ಪೊಲೀಸರಿಗೂ ಬೇಕಾಗಿದ್ದರು.
ಇದನ್ನೂ ಓದಿ:ಬೆಳಗಾವಿ ಸಿಇಎನ್ ಪೊಲೀಸರ ದಾಳಿ: ಜೂಜಾಟದಲ್ಲಿ ತೊಡಗಿದ್ದ 70 ಮಂದಿ ಬಂಧನ