ಕರ್ನಾಟಕ

karnataka

ETV Bharat / state

ಚಾಮರಾಜನಗರದ ಆಕ್ಸಿಜನ್​ ದುರಂತ ನೆನೆದು ಭಾವುಕರಾದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

ವಿರೋಧ ಪಕ್ಷದವರು ಇದುವರೆಗೂ 34 ಜನ ಸತ್ತಿದ್ದಾರೆ ಅಂತಾರೆ. ಆದರೆ, ಮೂವರು ಮಾತ್ರ ಸತ್ತಿದ್ದಾರೆಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದರು. ರಾಜ್ಯದಲ್ಲಿ ಅನೇಕ ಸಾವು-ನೋವುಗಳು ನಡೆಯುತ್ತಿವೆ. ಈ ಕುರಿತು ಸಿಎಂ‌ ಅವರಿಗೂ ಸಹ ಪತ್ರ ಬರೆದಿದ್ದೆ, ನಾನು ಅಸಹಾಯಕನಾಗಿಲ್ಲ,‌ ಹೋರಾಟ ಮಾಡುತ್ತಿರುವೆ..

By

Published : May 24, 2021, 3:16 PM IST

Updated : May 24, 2021, 5:35 PM IST

ramesh
ramesh

ಕೋಲಾರ : ಕೊರೊನಾ ಸಂಕಷ್ಟ ಹಾಗೂ ಚಾಮರಾಜನಗರದಲ್ಲಿ ನಡೆದ ಘಟನೆಯನ್ನ ನೆನೆದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾದರು.

ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ನಡೆದ ಮನಕಲುಕುವಂತದ್ದು, ಆಕ್ಸಿಜನ್ ಕೊರತೆಯಿಂದ ಸಾಯುವುದು ಅಂದರೆ ಏನು?, ಕೊಲೆ ಮಾಡುವುದು ಅಂದರೆ ಏನು ಎಂದು ಭಾವುಕರಾದರು.

ಚಾಮರಾಜನಗರ ಘಟನೆ ಕುರಿತು ಆರೋಗ್ಯ ಮಂತ್ರಿಗಳು ಸುಳ್ಳು ಹೇಳುತ್ತಾರೆ ಎಂದು ರಮೇಶ್​ ಕುಮಾರ್​ ದೂರಿದ್ರು. ಆ ದುರಂತ ಘಟನೆಯಲ್ಲಿ 20- 30 ವರ್ಷದವರು ಸಾವನ್ನಪ್ಪಿದರುತ. ಇನ್ಯಾವ ಪುರುಷಾರ್ಥಕ್ಕಾಗಿ ಇವರು ಇರಬೇಕು ಎಂದರು.

ಘಟನೆಯಿಂದ ಸತ್ತ ಪ್ರತಿಯೊಬ್ಬರಿಗೂ ಕುಟುಂಬ ಎಂಬುದಿದೆ, ಅವರ ಕುಟುಂಬದ ಪೋಷಣೆ ಸತ್ತವರೇ ಮಾಡುತ್ತಿದ್ದರು. ಆದರೆ, ಇದೀಗ ಅವರ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ತಿಳಿಸಿದ್ರು‌.

ಚಾಮರಾಜನಗರದ ಆಕ್ಸಿಜನ್​ ದುರಂತ ನೆನೆದು ಭಾವುಕರಾದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

ಈ ಕುರಿತು ಈವರೆಗೂ ಯಾರೊಬ್ಬರ ಮೇಲೆಯೂ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ರು. ಅವರು ಇನ್ನೊಬ್ಬರ ನೋವು ನಮ್ಮ ನೋವು ಅಂತ ಗ್ರಹಿಸಿಕೊಳ್ಳಬೇಕು ಎಂದ್ರು.

ಇನ್ನು, ಕೋಲಾರದ ಮೂಲದ ಪಿಎಸ್​​ಐ ಶಾಲಿನಿ ಅವರನ್ನ ನೆನೆದು ಸಹ ಭಾವುಕರಾದ ಮಾಜಿ ಸ್ಪೀಕರ್​, ಕೊರೊನಾ ಆ ಹೆಣ್ಣು ಮಗಳ ಪ್ರಾಣ ತೆಗೆದುಕೊಂಡು ಹೋಗಿದೆ. ಆಕೆ ಪ್ರೊಪೆಷನರಿ ಮುಗಿದ ನಂತರ ನನ್ನನ್ನ ಕೋಲಾರಕ್ಕೆ ವರ್ಗಾವಣೆ ಮಾಡಿ ಕೊಡಿ ಎಂದು ಗೋಗರೆದಿದ್ದಳು ಎಂದು ನೆನೆದರು.

ತೋಳ್ಬಲ ಇದ್ದವನಿಗೆ ಖಡ್ಗ ಬರ್ತಿತ್ತು, ಖಡ್ಗ ಬಲ ಇದ್ದವನಿಗೆ ಕಿರೀಟ ಬರುತ್ತೆ. ಕಿರೀಟ ಇದ್ದವನಿಗೆ ಸಿಂಹಾಸನ ಬರುತ್ತಿತ್ತು. ಬಲಾಢ್ಯನಿದ್ರೆ ದುರ್ಬಲರನ್ನು ಕೊಲ್ಲಬಹುದು ಎಂದ್ರು. ಆ ವ್ಯವಸ್ಥೆ ಬೇಡ ಅಂತ ಈ ವ್ಯವಸ್ಥೆ ತಂದ್ವಿ. ಆದ್ರೆ, ಇದು ಅದೇ ತರ ಆಗಿದೆ ಎಂದು ಮಾರ್ಮಿಕವಾಗಿ ನುಡಿದರು.

ವಿರೋಧ ಪಕ್ಷದವರು ಇದುವರೆಗೂ 34 ಜನ ಸತ್ತಿದ್ದಾರೆ ಅಂತಾರೆ. ಆದರೆ, ಮೂವರು ಮಾತ್ರ ಸತ್ತಿದ್ದಾರೆಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದರು. ರಾಜ್ಯದಲ್ಲಿ ಅನೇಕ ಸಾವು-ನೋವುಗಳು ನಡೆಯುತ್ತಿವೆ. ಈ ಕುರಿತು ಸಿಎಂ‌ ಅವರಿಗೂ ಸಹ ಪತ್ರ ಬರೆದಿದ್ದೆ, ನಾನು ಅಸಹಾಯಕನಾಗಿಲ್ಲ,‌ ಹೋರಾಟ ಮಾಡುತ್ತಿರುವೆ ಎಂದು ಹೇಳಿದ್ರು.

Last Updated : May 24, 2021, 5:35 PM IST

ABOUT THE AUTHOR

...view details