ಕರ್ನಾಟಕ

karnataka

ETV Bharat / state

ಕೊರೊನಾ ಭೀತಿಯಿಂದ ಬಡವರ ಧರ್ಮಾಸ್ಪತ್ರೆಯತ್ತ ಬರಲು ರೋಗಿಗಳಿಗೆ ಭಯ.. - Narayanaswamy District Surgeons

ಇದು ನೂರು ವರ್ಷಗಳಷ್ಟು ಹಳೆಯ ಧರ್ಮಾಸ್ಪತ್ರೆ. ನಿತ್ಯ ಸಾವಿರಾರು ಬಡ, ನಿರ್ಗತಿಕರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಅದೆಷ್ಟೋ ಗರ್ಭಿಣಿಯರಿಗೆ ಹೆರಿಗೆ ಕೂಡಾ ಮಾಡಲಾಗುತ್ತಿತ್ತು. ಆದರೆ, ಈ ಕೊರೊನಾ ಬಂದು ಆಸ್ಪತ್ರೆಗೂ ಇತರ ರೋಗಿಗಳು, ಗರ್ಭಿಣಿಯರು ಬಾರದಂತೆ ಮಾಡಿದೆ..

patients who do not enter the hundreds of years old Hospital in Kolar
ಕೊರೊನಾ ಭೀತಿ: ನೂರಾರು ವರ್ಷ ಹಳೆಯ ಧರ್ಮಾಸ್ಪತ್ರೆಗೆ ಕಾಲಿಡದ ರೋಗಿಗಳು

By

Published : Jun 23, 2020, 9:44 PM IST

ಕೋಲಾರ : ಶ್ರೀ ನರಸಿಂಹ ರಾಜಜಿಲ್ಲಾಸ್ಪತ್ರೆ ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆ ಇಂದಿಗೂ ಶ್ರೀ ನರಂಸಿಂಹರಾಜ ಒಡೆಯರ್​ ಧರ್ಮಾಸ್ಪತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಅಂದಿನಿಂದ ಈವರೆಗೂ ನಿತ್ಯ ಸಾವಿರಾರು ಸಂಖ್ಯೆಯ ಬಡ ರೋಗಿಗಳು ಉಚಿತ ಚಿಕಿತ್ಸೆ ನೀಡುತ್ತಾ ಬಂದಿದೆ.

ಕೊರೊನಾ ಭೀತಿ.. ನೂರಾರು ವರ್ಷ ಹಳೆಯ ಧರ್ಮಾಸ್ಪತ್ರೆಗೆ ಕಾಲಿಡದ ರೋಗಿಗಳು


ಕೊರೊನಾ ರೋಗಿಗಳಿಗಾಗಿ ಇದೇ ಜಿಲ್ಲಾಸ್ಪತ್ರೆ ಆವರಣದಲ್ಲೇ 200 ಬೆಡ್​ಗಳ ಕೋವಿಡ್​ ಆಸ್ಪತ್ರೆ ನಿರ್ಮಾಣ ಮಾಡಿದೆ. ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರನ್ನು ಇದೇ ಆಸ್ಪತ್ರೆಯ ಒಂದು ಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಭಯಗೊಂಡ ಜನ ಈ ಆಸ್ಪತ್ರೆಗೆ ಬರೋದನ್ನೇ ಕಡಿಮೆ ಮಾಡಿದ್ದಾರೆ. ನಿತ್ಯ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಜೊತೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಡ ಗರ್ಭಿಣಿಯರು ಇಲ್ಲಿ ಬಂದು ಉಚಿತ ಹೆರಿಗೆ ಮಾಡಿಸಿಕೊಂಡು ಹೋಗುತ್ತಿದ್ದರು.

ಕೊರೊನಾ ಆರಂಭಕ್ಕೂ ಮೊದಲು ತಿಂಗಳಿಗೆ ಸರಾಸರಿ 500 ಹೆರಿಗೆ ಆಗ್ತಿದ್ದರೇ ಈಗ ಅದು 300ಕ್ಕಿಳಿದಿದೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡ್ತಿರೋದ್ರಿಂದ ಗರ್ಭಿಣಿಯರ ಸಂಖ್ಯೆಯೂ ಸೇರಿ ಇತರ ರೋಗಿಗಳಿಗೂ ಇತ್ತ ಸುಳಿಯುತ್ತಿಲ್ಲ. ಈಗ ಹೊಸದಾಗಿ ಆವರಣದಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಿಸಲಾಗಿದೆ. ಆದರೂ ಕೊರೊನಾ ಭಯಕ್ಕೆ ರೋಗಿಗಳು ಬರುತ್ತಿಲ್ಲ. ಬಡವರ ಧರ್ಮಾಸ್ಪತ್ರೆಗೆ ಕೊರೊನಾ ಕರಿನೆರಳು ಬಿದ್ದಿದೆ.

ಇದು ಖಾಸಗಿ ಆಸ್ಪತ್ರೆಗಳಿಗೆ ವರವಾಗಿ ಪರಿಣಮಿಸಿದೆ. ಬಡವರನ್ನು ಸುಲಿಗೆ ಮಾಡಲು ದಾರಿ ಮಾಡಿಕೊಟ್ಟಂತಾಗಿದೆ. ಇತ್ತ ಕೊರೊನಾ ಭಯದಲ್ಲಿ ಜನ ಸರ್ಕಾರಿ ಆಸ್ಪತ್ರೆಗೆ ಬರೋದಕ್ಕೆ ಭಯಪಡುತ್ತಿದ್ದಾರೆ.

ABOUT THE AUTHOR

...view details