ಕೊಲಾರ: ರೈತರಿಗೆ ಸೇರಬೇಕಿದ್ದ ಯೂರಿಯಾ ರಸಗೊಬ್ಬರ ಖಾಸಗಿ ಗೋಡೌನ್ ಪಾಲಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾವನ್ನು ವಶಕ್ಕೆ ಪಡೆದಿದ್ದಾರೆ.
ಕೃಷಿ ಅಧಿಕಾರಿಗಳ ಕಾರ್ಯಾಚರಣೆ: ಅಕ್ರಮವಾಗಿರಿಸಿದ್ದ 450 ಯೂರಿಯಾ ಮೂಟೆಗಳ ವಶ
ಕೊಲಾರದಲ್ಲಿ ರೈತರಿಗೆ ಸೇರಬೇಕಿದ್ದ ಯೂರಿಯಾ ಖಾಸಗೀ ಗೋಡೌನ್ ಪಾಲಾಗಿದ್ದು, ಕಳೆದ ರಾತ್ರಿ ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾವನ್ನು ವಶಕ್ಕೆ ಪಡೆದಿದ್ದಾರೆ.
ಯೂರಿಯಾ
ರೈತರಿಗೆ ಸರಬರಾಜು ಮಾಡಬೇಕಿದ್ದ ಯೂರಿಯಾ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಡಗಿನಬೆಲೆ ಗ್ರಾಮದ ಬಳಿ ಇರುವ ಮರ್ಕ್ಯುರಿ ಪಾಲಿಮರ್ ಖಾಸಗಿ ಕಾರ್ಖಾನೆಯ ಗೋಡೌನ್ಗೆ ಸರಬರಾಜು ಮಾಡಲಾಗಿತ್ತು ಎನ್ನಲಾಗ್ತಿದೆ.
ಖಚಿತ ಮಾಹಿತಿ ಮೇರೆಗೆ ಸಹಾಯಕ ಕೃಷಿ ಅಧಿಕಾರಿ ಚಂದ್ರಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಸುಮಾರು 450ಕ್ಕೂ ಹೆಚ್ಚಿನ ಯೂರಿಯಾ ಮೂಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.