ಕೋಲಾರ:ಜಿಲ್ಲೆಯ ಕೆಜಿಎಫ್ ರಾಬರ್ಟ್ ಸನ್ ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆಯಲ್ಲಿ ಸುಮಾರು ಒಂದು ಕೋಟಿ ಮೌಲ್ಯದ 200 ಕೆಜಿಯಷ್ಟು ಗಾಂಜಾ ಸಿಕ್ಕಿದೆ.
ಕೆಜಿಎಫ್ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೋಟಿ ಮೌಲ್ಯದ 8 ಮೂಟೆ ಗಾಂಜಾ ವಶ
ರಾಜ್ಯದಲ್ಲಿ ಗಾಂಜಾ ಸುದ್ದಿ ಮುನ್ನಲೆಗೆ ಬರುತ್ತಿದ್ದಂತೆ ಫುಲ್ ಅಲರ್ಟ್ ಆಗಿರುವ ಪೊಲೀಸ್ ಇಲಾಖೆ ಗಾಂಜಾ ಮಾರುವವರ ಬೆನ್ನತ್ತಿದೆ. ಅಂತೆಯೇ ಕೆಜಿಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 200 ಕೆಜಿಯಷ್ಟು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
ಗಾಂಜಾ ವಶ
ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಓರ್ವ ಅರೋಪಿ ಜೋಸೆಫ್ ಸೇರಿ ಸುಮಾರು 8 ಮೂಟೆ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸದ್ಯ ಸ್ಥಳದಲ್ಲಿ ಬೀಡು ಬಿಟ್ಟಿರುವ ಡಿವೈಎಸ್ಪಿ ಉಮೇಶ್ ಸೇರಿದಂತೆ ಪೊಲೀಸರು ಗಾಂಜಾ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಗಿರಿ ಲೈನ್ ನ ಮನೆಯಲ್ಲಿ ಈ ಗಾಂಜಾ ಪತ್ತೆಯಾಗಿದ್ದು, ಎರಡು ಕೆಜಿ ತೂಕದ ಸುಮಾರು 80 ಪ್ಯಾಕೇಟ್ಗಳು ಪತ್ತೆಯಾಗಿವೆ. ಇನ್ನೂ ಈ ಸಂಬಂಧ ನಾಳೆ ಐಜಿ ಸೀಮಂತ್ ಕುಮಾರ್ ಸಿಂಗ್ ಕೆಜಿಎಫ್ಗೆ ಭೇಟಿ ನೀಡಲಿದ್ದಾರೆ.