ಕೊಳ್ಳೇಗಾಲ: ಮಲಗುವಾಗ ಹಚ್ಚಿಟ್ಟಿದ್ದ ಮೇಣದಬತ್ತಿಯಿಂದ ಬೆಡ್ಶೀಟ್ಗೆ ಬೆಂಕಿ ಹೊತ್ತಿಕೊಂಡು ವೃದ್ಧಯೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ನಡೆದಿದೆ.
ಹರಳೆ ಗ್ರಾಮದ ಸಿದ್ದನಾಯಕ (65) ವರ್ಷದ ವ್ಯಕ್ತಿ ಮೃತ. ಸಿದ್ದನಾಯಕ ಅವರಿಗೆ ಕುಡಿತದ ಚಟವಿದ್ದು, ಪ್ರತಿದಿನ ಮದ್ಯಪಾನ ಮಾಡಿಕೊಂಡು ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಪ್ಲಾಸ್ಟಿಕ್ ಚಾಪೆ ಮೇಲೆ ಮೇಣದ ಬತ್ತಿ ಹಚ್ಚಿಕೊಂಡು ಮಲಗುತ್ತಿದ್ದರು.