ಕೋಲಾರ:ಕರ್ನಾಟದಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುವ ಮೂಲಕ ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರನ್ನ ಎಲ್ಲೂ ಇಲ್ಲದಂತೆ ಮಾಡಿ ಕೈಬಿಟ್ಟಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ 'ಹಳ್ಳಿ ಹಕ್ಕಿ' ಬಗ್ಗೆ ಅನುಕಂಪ ತೋರಿದರು.
ಪರಿಷತ್‌ನತ್ತ ಹಾರದ 'ಹಳ್ಳಿ ಹಕ್ಕಿ'.. ಹೆಚ್.ವಿಶ್ವನಾಥ್ ಬಗ್ಗೆ ಕೃಷ್ಣ ಬೈರೇಗೌಡ ಅನುಕಂಪ - H Vishwanath reaction
ಬಿಜೆಪಿಯವರ ಅಧಿಕಾರ ದಾಹಕ್ಕೆ ಇದೊಂದೇ ಉದಾಹರಣೆ ಸಾಕು. ಸಮಯ ಬಂದಾಗ ಬೇಕಾದವರನ್ನು ಬಳಸುವುದು ಅವರ ಹವ್ಯಾಸ. ಬೇರೆಯವರು ಇದನ್ನ ನೋಡಿ ಕಲಿಯಬೇಕು..
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮುರಿದು ಹೊಸ ಸರ್ಕಾರ ಮಾಡುವುದಕ್ಕೆ ವಿಶ್ವನಾಥ್ ಅವರೇ ಕಾರಣ ಎಂದು ಹೇಳುತ್ತಿದ್ದಾರೆ. ಅಂತಹ ಪಕ್ಷವೊಂದರರಾಜ್ಯಾಧ್ಯಕ್ಷರಾಗಿದ್ದವರನ್ನ ಬಿಜೆಪಿ ನಂಬಿಸಿ ಕರೆತಂದು ಭರಪೂರ ಭರವಸೆ ನೀಡಿತ್ತು. ಆದರೆ, ಇವತ್ತು ಅವರನ್ನ ನಡುನೀರಲ್ಲಿ ಕೈಬಿಟ್ಟಿದೆ ಎಂದು ಪರಿಷತ್ ಟಿಕೆಟ್ ವಂಚಿತ 'ಹಳ್ಳಿ ಹಕ್ಕಿ' ಹೆಚ್ ವಿಶ್ವನಾಥ್ ಪರ ಬ್ಯಾಟ್ ಬೀಸಿದರು.
ಬಿಜೆಪಿಯವರ ಅಧಿಕಾರ ದಾಹಕ್ಕೆ ಇದೊಂದೇ ಉದಾಹರಣೆ ಸಾಕು. ಸಮಯ ಬಂದಾಗ ಬೇಕಾದವರನ್ನು ಬಳಸಿಕೊಳ್ಳುವುದು ಅವರ ಹವ್ಯಾಸ. ಬೇರೆಯವರು ಇದನ್ನ ನೋಡಿ ಕಲಿಯಬೇಕು. ಅಧಿಕಾರದ ಆಸೆಗೆ ಒಳಗಾಗುವಂತವರಿಗೆ ಇದು ಪಾಠ ಎಂದರು.