ಕೋಲಾರ : ಕೊರೊನಾ ಬಂದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಿ ಮಹಿಳೆಯ ಅಂತ್ಯಸಂಸ್ಕಾರ ಮಾಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚೊಕ್ಕರೆಡ್ಡಿಪಲ್ಲಿಯಲ್ಲಿ ನಡೆದಿದೆ.
ಕೊರೊನಾ ಶಂಕೆ: ಅಂತ್ಯ ಸಂಸ್ಕಾರ ತಡೆಹಿಡಿದ ಗ್ರಾಮಸ್ಥರು - ಕೊರೊನಾ ಶಂಕೆ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚೊಕ್ಕರೆಡ್ಡಿಪಲ್ಲಿಯಲ್ಲಿ ಕೊರೊನಾ ಬಂದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಿ ಮಹಿಳೆಯ ಅಂತ್ಯಸಂಸ್ಕಾರ ಮಾಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ತಾಲೂಕಿನ ಚೊಕ್ಕರೆಡ್ಡಿಪಲ್ಲಿ ಗ್ರಾಮದ ಅರುಣಾ(43) ವರ್ಷದ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಮೃತದೇಹವನ್ನು ಹುಟ್ಟೂರಿಗೆ ತಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ, ಗ್ರಾಮಸ್ಥರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಿ ಅಂತ್ಯಸಂಸ್ಕಾರ ನಡೆಸಲು ತಡೆ ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಕೆಲಕಾಲ ಗ್ರಾಮದಲ್ಲಿ ಆತಂಕ ಎದುರಾಗಿತ್ತು. ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರು, ನರ್ಸ್ಗಳು ಸ್ಥಳಕ್ಕೆ ಬಂದು ಮಹಿಳೆಯ ಡೆತ್ ಸರ್ಟಿಫಿಕೇಟ್ ತೋರಿಸಿದ ನಂತರ ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿದರು. ಬಳಿಕ ಮಹಿಳೆಯ ಅಂತ್ಯಸಂಸ್ಕಾರವನ್ನು ತೋಟದ ಮನೆಯಲ್ಲಿ ನೆರವೇರಿಸಿದರು.