ಕರ್ನಾಟಕ

karnataka

ETV Bharat / state

ಕೋಲಾರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ - Kolar Kannada sahitya parishat

ಕನ್ನಡ ಸದಸ್ಯರು ಅವಕಾಶ ಕೊಟ್ಟಲ್ಲಿ ಕೋಲಾರ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ನಡೆಸುವುದಾಗಿ ಹೇಳಿದರು.

Kasapa kolar
Kasapa kolar

By

Published : Apr 7, 2021, 5:33 PM IST

ಕೋಲಾರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಶ್ರೀನಿವಾಸಪುರದ ವೇಣು ವಿದ್ಯಾ ಸಮೂಹ ಸಂಸ್ಥೆಗಳ‌ ಮಾಲೀಕ ಗೋಪಾಲಗೌಡ ನಾಮಪತ್ರ ಸಲ್ಲಿಸಿದರು.

ಅಪಾರ ಬೆಂಬಲಿಗರೊಂದಿಗೆ ಕೋಲಾರದ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಅವರು, ಇದಕ್ಕೂ ಮುನ್ನಾ ರಂಗಮಂದಿರದಿಂದ ತಹಶೀಲ್ದಾರ್ ಕಚೇರಿವರೆಗೆ ಜಾಥಾ ನಡೆಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಈ ಬಾರಿ ತನಗೆ ಅವಕಾಶ ನೀಡಿದ್ದಲ್ಲಿ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ಸಾಹಿತ್ಯ ಭವನವನ್ನ ಕಟ್ಟುವುದಾಗಿ ಹೇಳಿದರು.

ಅಲ್ಲದೆ ಸುಮಾರು ವರ್ಷಗಳ ಹಿಂದೆ ಕೈವಾರದಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಇದುವರೆಗೂ ಕೋಲಾರ ಜಿಲ್ಲೆಯಲ್ಲಿ ನಡೆಸಲು ಸಾಧ್ಯವಾಗಲಿಲ್ಲ.

ಕನ್ನಡ ಸದಸ್ಯರು ಅವಕಾಶ ಕೊಟ್ಟಲ್ಲಿ ಕೋಲಾರ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಹೇಳಿದರು. ಇನ್ನು ಜಿಲ್ಲೆಯಲ್ಲಿ ಯುವ ಬರಹಗಾರರು, ಕವಿಗಳು ಇದ್ದು ಅವರ‌ನ್ನ ಗುರುತಿಸುವುದರೊಂದಿಗೆ ಕೋಲಾರ ಜಿಲ್ಲೆಯಿಂದ ಸಾಹತ್ಯವನ್ನ ತಿಳಿಸುವ ಕೆಲಸ ಮಾಡುತ್ತೇನೆ ಎಂದರು.

ABOUT THE AUTHOR

...view details