ಕರ್ನಾಟಕ

karnataka

ETV Bharat / state

'ಮನುಷ್ಯ ಅಂದ್ಮೇಲೆ ಚಪಲ ಇರುತ್ತೆ, ಅಸಹ್ಯವಾಗಿ ನಡ್ಕೊಂಡಾಗ ಸಂವಿಧಾನ ಶಿಕ್ಷೆ ಕೊಡುತ್ತೆ'

ಕೊಚ್ಚೆ ನೀರಲ್ಲಿ ಸಂಪಿಗೆ ವಾಸನೆ ಬರುವುದಿಲ್ಲ. ಮನುಷ್ಯ ಅಂದ ಮೇಲೆ ಚಪಲ ಇರುತ್ತೆ. ಪಂಚೇಂದ್ರಿಯಗಳು ಕೆಲಸ ಮಾಡುತ್ತವೆ. ಇದೆಲ್ಲಾ ಕಾಮನ್, ದೊಡ್ಡ ವಿಚಾರವೇ ಅಲ್ಲ. ಆದರೆ ಜನರ ಕಷ್ಟ ಯಾರೂ ಮಾತಾಡಲ್ಲ. ಜೊತೆಗೆ ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನವೇ ಶಿಕ್ಷೆ ಕೊಡುತ್ತೆಮಾಜಿ ಸ್ಪೀಕರ್​​ ರಮೇಶ್​ ಅವರು ಹೇಳಿದರು.

i-do-not-have-relationship-with-cd-case
ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

By

Published : Apr 2, 2021, 3:39 PM IST

ಕೋಲಾರ: ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನನ್ನೇನೂ ಕೇಳಬೇಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿಡಿ ಪ್ರಕರಣದ ಕುರಿತು ಹೇಳಿಕೆ ನೀಡಿದರು.

ಕೆ.ಆರ್‌.ರಮೇಶ್‌ ಕುಮಾರ್‌

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ನನಗಿಲ್ಲ, ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದೆ. ಹೀಗಾಗಿ ಈ ವಿಚಾರದ ಕುರಿತು ಹೆಚ್ಚು ಆಸಕ್ತಿಯಿಂದ ವ್ಯಾಖ್ಯಾನ ಮಾಡುವುದು ನನ್ನ ಯೋಗ್ಯತೆ ಹಾಗೂ ಗೌರವಕ್ಕೆ ಒಳ್ಳೆಯದಲ್ಲ ಎಂದರು.

'ಇನ್ನು ಸಂತ್ರಸ್ತೆ ಆಯ್ತು, ಅವರಾಯ್ತು'

ಅಧಿವೇಶನ ಸಮಯದಲ್ಲಿ ನ್ಯಾಯವಾಗಿ ಮಾತನಾಡಿದ್ದೇನೆ, ಸಂತ್ರಸ್ತೆ ಕೋರ್ಟ್ ಮುಂದೆ ಬಂದಮೇಲೆ ಎಲ್ಲಾ ಮುಗೀತು. ಇನ್ನು ಕೋರ್ಟ್ ಆಯ್ತು ಅವರಾಯ್ತು ಅಷ್ಟೆ. ನ್ಯಾಯಾಂಗವೇ ಸಂತ್ರಸ್ತೆಗೆ ಅವಕಾಶ ನೀಡಿದ್ದು, ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು ಎಂದರು.

'ಮನುಷ್ಯ ಅಂದ್ಮೇಲೆ ಚಪಲ ಇರುತ್ತೆ, ಅಸಹ್ಯವಾಗಿ ನಡ್ಕೊಂಡಾಗ ಸಂವಿಧಾನ ಶಿಕ್ಷೆ ಕೊಡುತ್ತೆ'

ಸಿಡಿ ವಿಚಾರವಾಗಿ ರಾಜಕೀಯ ಪಕ್ಷಗಳ ಮಧ್ಯೆ ವಾಗ್ವಾದಕ್ಕೆ ಪ್ರತಿಕ್ರಿಯಿಸಿದ ಅವರು, ಕೊಚ್ಚೆ ನೀರಲ್ಲಿ ಸಂಪಿಗೆ ವಾಸನೆ ಬರುವುದಿಲ್ಲ. ಮನುಷ್ಯ ಅಂದ ಮೇಲೆ ಚಪಲ ಇರುತ್ತೆ. ಪಂಚೇಂದ್ರಿಯಗಳು ಕೆಲಸ ಮಾಡುತ್ತವೆ. ಇದೆಲ್ಲಾ ಕಾಮನ್, ದೊಡ್ಡ ವಿಚಾರವೇ ಅಲ್ಲ. ಆದರೆ ಜನರ ಕಷ್ಟ ಯಾರೂ ಮಾತಾಡಲ್ಲ ಎಂದರು. ಜೊತೆಗೆ ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನವೇ ಶಿಕ್ಷೆ ಕೊಡುತ್ತೆ ಎಂದು ತಿಳಿಸಿದರು.

'ಚಪ್ಪಲಿ ಹಳೆಯದಾಗಿತ್ತೇನೋ ಇರ್ಲಿ ಬಿಡಿ'

ಇನ್ನು ಡಿ.ಕೆ. ಶಿವಕುಮಾರ್ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಚಪ್ಪಲಿ ಹಳೆಯದಾಗಿತ್ತೇನೋ ಇರ್ಲಿ ಬಿಡಿ, ಕಾರ್ಪೊರೇಷನ್ ಅವ್ರು ಕ್ಲೀನ್ ಮಾಡ್ತಾರೆ ಎಂದರು.

ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿ, ಕಾಂಗ್ರೆಸ್ ಅಲ್ಲದೇ ಯಾರಾದ್ರು ಆಗ್ರಹ ಮಾಡಬಹುದು ಎಂದು ಹೇಳಿದರು.

ABOUT THE AUTHOR

...view details