ಕರ್ನಾಟಕ

karnataka

ETV Bharat / state

ತಮಿಳುನಾಡು ಚುನಾವಣೆ: ರಾಜ್ಯದ ಗಡಿ ಭಾಗದಲ್ಲಿ ಮದ್ಯದ ಘಾಟು ತಡೆಯಲು ಪೊಲೀಸ್​​ ಇಲಾಖೆ ಕಟ್ಟೆಚ್ಚರ

ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ತಾಲೂಕುಗಳು ತಮಿಳುನಾಡು ಗಡಿಭಾಗಗಳನ್ನ ಹೊಂದಿಕೊಂಡಿವೆ. ಇದೀಗ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ರಂಗೇರಿದ್ದು, ಚುನಾವಣೆಯಲ್ಲಿ ಮದ್ಯದ ಘಾಟು ಜೋರಾಗಿದೆ. ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದೆ.

illegal-liquer-supplying-karnataka-to-tamil-nadu-due-to-election
ಪೊಲೀಸ್​​ ಇಲಾಖೆ

By

Published : Apr 3, 2021, 6:55 PM IST

Updated : Apr 3, 2021, 7:15 PM IST

ಕೋಲಾರ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ಅಕ್ರಮ ಮದ್ಯದ ಘಾಟು ಜೋರಾಗಿಯೇ ಇದೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲೆಯ ಅಬಕಾರಿ ಇಲಾಖೆ ಗಡಿಯಲ್ಲಿ ಅಕ್ರಮ ಮದ್ಯ ಸಾಗಾಣಿಕೆಗೆ ಬ್ರೇಕ್ ಹಾಕುವುದರ ಜೊತೆಗೆ ಅಕ್ರಮ ಮದ್ಯ ಮಾರಾಟ ಮಾಡಿದ್ರೆ ಸನ್ನದ್ದು ರದ್ದುಪಡಿಸುವ ಎಚ್ಚರಿಕೆಯನ್ನೂ ನೀಡಿದೆ.

ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ತಾಲೂಕುಗಳು ತಮಿಳುನಾಡು ಗಡಿಭಾಗಗಳನ್ನ ಹೊಂದಿಕೊಂಡಿವೆ. ಇದೀಗ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ರಂಗೇರಿದ್ದು, ಚುನಾವಣೆಯಲ್ಲಿ ಮದ್ಯದ ಘಾಟು ಜೋರಾಗಿದೆ. ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಗಡಿಭಾಗದ ಕೋಲಾರ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಣೆ ಆಗದಂತೆ ಅಬಕಾರಿ ಇಲಾಖೆ ಎಚ್ಚರಿಕೆ ವಹಿಸಿದೆ. ಜೊತೆಗೆ ತಮಿಳುನಾಡು ಧರ್ಮಪುರಿ ಜಿಲ್ಲೆಯ ಡಿಸಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆದು ಚರ್ಚಿಸಲಾಗಿದೆ.

ರಾಜ್ಯದ ಗಡಿ ಭಾಗದಲ್ಲಿ ಮದ್ಯದ ಘಾಟು ತಡೆಯಲು ಪೊಲೀಸ್​​ ಇಲಾಖೆ ಕಟ್ಟೆಚ್ಚರ

ಮಾಲೂರು ಮತ್ತು ಬಂಗಾರಪೇಟೆ ತಾಲೂಕುಗಳ ಗಡಿ ಭಾಗದಲ್ಲಿರೋ 20ಕ್ಕೂ ಹೆಚ್ಚು ಮದ್ಯದ ಅಂಗಡಿಗಳ ಸನ್ನದ್ದುದಾರರ ಸಭೆ ಕರೆದು, ಅಕ್ರಮವಾಗಿ ಮದ್ಯ ಸಾಗಾಣಿಕೆ ಹಾಗೂ ಮಾರಾಟ ಕಂಡು ಬಂದರೆ ಮದ್ಯದಂಗಡಿಗಳ ಲೈಸೆನ್ಸ್ ರದ್ದುಪಡಿಸುವ ಎಚ್ಚರಿಕೆಯನ್ನ ನೀಡಲಾಗಿದೆ. ಗಡಿಭಾಗದ ವ್ಯಾಪ್ತಿಯ ಮದ್ಯದಂಗಡಿಗಳಲ್ಲಿ ಹೆಚ್ಚು ಮದ್ಯವನ್ನ ಸಂಗ್ರಹಿಸಬಾರದು. ಜನವರಿ ತಿಂಗಳಿನಲ್ಲಿ ಇಡಲಾಗಿದ್ದ ಸ್ಟಾಕ್ ಗಿಂತ ಹೆಚ್ಚಿಗೆ ಇಟ್ಟುಕೊಳ್ಳುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಮಾಲೂರು, ಬಂಗಾರಪೇಟೆ ಗಡಿ ಗ್ರಾಮಗಳಾದ ಕೆಸರಗೆರೆ, ಸಂಪಂಗೆರೆ, ಕನಮನಹಳ್ಳಿಯಲ್ಲಿ ಬೀಗಿ ಬಂದೋಬಸ್ತ್ ಮಾಡಲಾಗಿದೆ. ಅದೇ ರೀತಿ ತಮಿಳುನಾಡು ಪೊಲೀಸ್ ಜೊತೆ ಮಾತುಕತೆ ನಡೆಸಲಾಗಿದ್ದು, ಪೂರ್ಣಪ್ರಮಾಣದ ಸಹಕಾರ ನೀಡಲು ಕೋಲಾರ ಜಿಲ್ಲಾ ಪೊಲೀಸ್ ಸಿದ್ದವಾಗಿದೆ. ತಮಿಳುನಾಡಿನ ಚೆಕ್ ಪೋಸ್ಟ್​ಗಳಲ್ಲಿ ತಮಿಳುನಾಡು ಅಬಕಾರಿ ಇಲಾಖೆಯವರು ಎಚ್ಚರ ವಹಿಸಿದ್ದಾರೆ.

ಒಟ್ಟಾರೆ ತಮಿಳುನಾಡು ಚುನಾವಣೆಗೆ ರಾಜ್ಯದಿಂದ ಅಕ್ರಮ ಮದ್ಯ ಸಾಗಾಣಿಕೆ ತಡೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಸನ್ನದ್ದುದಾರರು ರಂಗೋಲಿ ಕೆಳಗಾದ್ರೂ ತೂರಿ ಅಕ್ರಮವಾಗಿ ಮದ್ಯ ಸಾಗಿಸಲು ತಯಾರಿ ನಡೆಸಿದ್ದು, ಜಿಲ್ಲೆಯ ಅಬಕಾರಿ ಇಲಾಖೆಯವರು ಯಾವ ರೀತಿ ಕ್ರಮ ಕೈಗೊಳ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Last Updated : Apr 3, 2021, 7:15 PM IST

ABOUT THE AUTHOR

...view details