ಕರ್ನಾಟಕ

karnataka

ETV Bharat / state

ದಿನೇಶ್‌ ಕಲ್ಲಹಳ್ಳಿ ಮೇಲೆ ಯಾವುದೇ ಆರೋಪ ಮಾಡಿಲ್ಲ : ಹೆಚ್​.ಡಿ.ಕೆ. ಸ್ಪಷ್ಟನೆ - ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ

ಕಳೆದ ಮೂರ್ನಾಲ್ಕು ತಿಂಗಳಿನಿಂದ ಘಟನೆ ನಡೆಯುತ್ತಿದೆ. ಅಗತ್ಯವಿದ್ದಲ್ಲಿ 5 ಕೋಟಿ ಡೀಲ್‌ ಸಂಬಂಧ ತನಿಖೆ ನಡೆಯಲಿ. ಸರ್ಕಾರ ತನಿಖೆ ನಡೆಸಿ ಸತ್ಯಾಂಶ ಹೊರಹಾಕಲಿ. ದೂರು ಅವರೇ ನೀಡಿದ್ದು, ಇದೀಗ ಅದರ ಉದ್ದೇಶ ಸಫಲವಾಗಿದೆ. ನಾನು ಕೋರ್ಟು ಅಲ್ಲ, ನಾನು ಇದರ ಕುರಿತು ಚರ್ಚೆ ಮಾಡೋಲ್ಲ.

ಕುಮಾರಸ್ವಾಮಿ
ಕುಮಾರಸ್ವಾಮಿ

By

Published : Mar 7, 2021, 5:21 PM IST

Updated : Mar 7, 2021, 5:28 PM IST

ಕೋಲಾರ : ನಾನು ದಿನೇಶ್‌ ಕಲ್ಲಹಳ್ಳಿ ಮೇಲೆ ಯಾವುದೇ ಆರೋಪ ಮಾಡಿಲ್ಲ, ಡೀಲ್‌ ನಡೆದಿದೆ ಎಂದಷ್ಟೇ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​. ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಹೆಚ್​​.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಹಿನ್ನೆಲೆ ದೂರು ಹಿಂಪಡೆಯುತ್ತಿದ್ದೇನೆ ಎಂಬ ದಿನೇಶ್​ ಕಲ್ಲಹಳ್ಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ದಿನೇಶ್‌ ಕಲ್ಲಹಳ್ಳಿ ಮೇಲೆ ಯಾವುದೇ ಆರೋಪ ಮಾಡಿಲ್ಲ. ಅವರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಈ ಪ್ರಕರಣದಲ್ಲಿ ಡೀಲ್‌ ನಡೆದಿದೆ ಎಂದು ಹೇಳಿದ್ದೆ ಅಷ್ಟೇ ಎಂದು ತಿಳಿಸಿದರು.

ದಿನೇಶ್​ ಕಲ್ಲಹಳ್ಳಿ ಆರೋಪಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

ಕಳೆದ ಮೂರ್ನಾಲ್ಕು ತಿಂಗಳಿನಿಂದ ಘಟನೆ ನಡೆಯುತ್ತಿದೆ. ಅಗತ್ಯವಿದ್ದಲ್ಲಿ 5 ಕೋಟಿ ಡೀಲ್‌ ಸಂಬಂಧ ತನಿಖೆ ನಡೆಯಲಿ. ಸರ್ಕಾರ ತನಿಖೆ ನಡೆಸಿ ಸತ್ಯಾಂಶ ಹೊರಹಾಕಲಿ. ದೂರು ಅವರೇ ನೀಡಿದ್ದು, ಇದೀಗ ಅದರ ಉದ್ದೇಶ ಸಫಲವಾಗಿದೆ. ನಾನು ಕೋರ್ಟು ಅಲ್ಲ, ನಾನು ಇದರ ಕುರಿತು ಚರ್ಚೆ ಮಾಡೋಲ್ಲ ಎಂದರು.

ಸಂತ್ರಸ್ತೆಗೆ ನೋವಾಗಿದ್ದರೆ, ಅನ್ಯಾಯವಾಗಿದ್ದರೆ ಸಂತ್ರಸ್ತೆ ಬರಬೇಕಿತ್ತು. ಆದ್ರೆ ಆಕೆ ಯಾಕೆ ಬಂದಿಲ್ಲ ಎಂದು ಕುಮಾರಸ್ವಾಮಿಯವರು ಪ್ರಶ್ನಿಸಿದರು.

Last Updated : Mar 7, 2021, 5:28 PM IST

ABOUT THE AUTHOR

...view details