ಕೋಲಾರ:ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದ್ದು, ಅಲ್ಪಸ್ವಲ್ಪ ಬರುವ ನೀರಿನಲ್ಲಿ ದ್ರಾಕ್ಷಿ ಬೆಳೆದಿರುವ ರೈತನ ಆದಾಯದ ಕನಸಿಗೆ ಕೊರೊನಾ ತಣ್ಣೀರೆರಚಿದೆ. ಇದರಿಂದ ರೈತ ಕಂಗಾಲಾಗಿದ್ದು, ಮುಂದೇನು ಎನ್ನುವ ಚಿಂತೆಯಲ್ಲಿದ್ದಾನೆ.
ಕೋಲಾರ ಜಿಲ್ಲೆಯ ಕೆಜಿಎಫ್ ಸಮೀಪದ ಕೊತ್ತೂರು ಗ್ರಾಮದಲ್ಲಿನ ರೈತ ಮುನಿವೆಂಕಟಪ್ಪ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಸಾಲಸೋಲ ಮಾಡಿ ಕುಟುಂಬ ಹಗಳಿರುಳೆನ್ನದೆ ದುಡಿದರ ಪರಿಣಾಮ ಉತ್ತಮ ಫಸಲು ಬಂದಿದೆ. ಆದರೆ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದರೂ ಕೋವಿಡ್-19ನಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ ತೋಟದಲ್ಲೇ ಕೊಳೆಯುವಂತಾಗಿದೆ. ಪರಿಣಾಮ ರೈತ ಮುನಿವೆಂಕಟಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.