ಕೋಲಾರ:ನಗರಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಮನೆಗಳ್ಳನನ್ನ ಬಂಧಿಸಿ, ಹತ್ತು ಲಕ್ಷ ಮೌಲ್ಯದ 210 ಗ್ರಾಂ ಚಿನ್ನವನ್ನ ವಶಪಡಿಸಿಕೊಂಡಿದ್ದಾರೆ.
ಗುಜರಿ ವ್ಯಾಪಾರಿಯ ಪಾರ್ಟ್‌ಟೈಮ್ ಕೆಲಸ ಮನೆಗಳ್ಳತನ.. ಪೊಲೀಸರ ಮುಂದೆ ಎಲ್ಲ ಬಾಯ್ಬಿಟ್ಟ - thief arrested in kolar
ಕೋಲಾರ ನಗರದಲ್ಲಿ ನಗರಠಾಣಾ ಪೊಲೀಸರು ಮನೆಗಳ್ಳತನ ಮಾಡ್ತಿದ್ದ ಖದೀಮನನ್ನು ಬಂಧಿಸಿ 210 ಗ್ರಾಂ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ.
ಕೋಲಾರ ವೃತ್ತ ನಿರೀಕ್ಷರ ರಂಗಸ್ವಾಮಯ್ಯ ಹಾಗೂ ಪಿಎಸ್.ಐ ಅಣ್ಣಯ್ಯ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿದ್ದು, ಕೋಲಾರ ನಗರದ ಕಠಾರಿಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ಬಂಗಾರಪಟ್ಟ ಎಂಬಾತನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಗುಜರಿ ವ್ಯಾಪಾರ ಮಾಡುತ್ತಿದ್ದು, ಸುಮಾರು ಆರು ಕಳ್ಳತನ ಪ್ರಕರಣಗಳಲ್ಲಿ ಭಾಗಿದ್ದಾನೆ.
ಇತ್ತೀಚೆಗೆ ನಗರದಲ್ಲಿ ಸರಗಳ್ಳತನ ಹೆಚ್ಚಾಗಿದ್ದು, ಪೊಲೀಸರು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದರು. ಅಲ್ಲದೆ ಮುಂಜಾನೆಯಷ್ಟೆ ಮಹಿಳೆಯೋರ್ವಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಸುಮಾರು 60 ಗ್ರಾಂ ಚಿನ್ನದ ಸರವನ್ನ ಕದ್ದು ಪರಾರಿಯಾದ ಪ್ರಕರಣ ಸಹ ಬೆಳಕಿಗೆ ಬಂದಿತ್ತು.