ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ಕುಮಾರ್ ಸುದ್ದಿಗೋಷ್ಠಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನನ್ನ ನಿಲುವನ್ನ ಒಪ್ಪಿಕೊಂಡಿದೆ. 42 ವರ್ಷ ನನ್ನ ಕಾಪಾಡಿದ ನನ್ನ ಕ್ಷೇತ್ರದ ಜನರ ಪಾದಗಳಿಗೆ ಇದನ್ನು ಅರ್ಪಿಸುತ್ತೇನೆ. ನನ್ನ ಪೋಷಣೆ ಮಾಡಿದ ನನ್ನ ಜನರಿಗೆ ಈ ತೀರ್ಪನ್ನು ಒಪ್ಪಿಸಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.
ಶಾಸಕರಿಗೆ ಅನರ್ಹತೆ ಒಂದು ಶಿಕ್ಷೆ. ಆದ್ರೆ ಮತ್ತೆ ಚುನಾವಣೆಗೆ ನಿಲ್ಲುವುದು ಸುಪ್ರೀಂ ನೀಡಿದ ಒಪ್ಪಿಗೆಯಾಗಿದ್ದು, ಈ ಬಗ್ಗೆ ಜನತಾ ನ್ಯಾಯಾಲಯ ತೀರ್ಮಾನ ಮಾಡಬೇಕಿದೆ. ಇನ್ನು ಸುಪ್ರೀಂ ತೀರ್ಮಾನಕ್ಕೆ ಗೌರವದಿಂದ ನಡೆದುಕೊಂಡಿದ್ದೇನೆ. ಅನರ್ಹತೆ ಬಗ್ಗೆ ಸುಪ್ರೀಂ ತೀರ್ಪಿನಿಂದಾಗಿ ನನ್ನ ಕ್ಷೇತ್ರದ ಜನತೆ ಎಲ್ಲಿ ತಲೆತಗ್ಗಿಸಬೇಕಾಗುವುದು ಎಂಬ ಅನುಮಾವಿತ್ತು. ಆದರೆ ಈ ತೀರ್ಪಿನಿಂದ ನನ್ನ ಕುಟುಂಬಸ್ಥರಿಗೆ, ಕ್ಷೇತ್ರದ ಜನರಿಗೆ ಗೌರವ ತಂದಿದೆ ಎಂದರು.
ಅಂದು ಹೈಕಮಾಂಡ್ ನಿರ್ಧಾರದಿಂದ ನಾನು ಸ್ಪೀಕರ್ ಆದೆ, ಜೊತೆಗೆ ನಾನು ಸಿದ್ದರಾಮಯ್ಯ ಮಾತನಾಡಿಕೊಂಡು ಪಕ್ಷದ ಉದ್ದೇಶದಿಂದ ನಾನು ಸ್ಪೀಕರ್ ಆದೆ. ಆ ಸ್ಥಾನದಲ್ಲಿರುವಾಗ ನಾನು ಗೌರವಯುತವಾಗಿ ನಡೆದುಕೊಂಡಿದ್ದೇನೆ ಎಂದು ರಮೇಶ್ಕುಮಾರ್ ಹೇಳಿದರು.