ಕೋಲಾರ: ಅಹಿಂದ ಎಂಬ ಪದವನ್ನ ರಾಜಕಾರಣಕ್ಕೆ ಬಳಸಿಕೊಳ್ಳುವಂತ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ ಎಂದು ಸಿದ್ದರಾಮಯ್ಯಗೆ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಹಿಂದ ಪದವನ್ನು ಸಿದ್ದರಾಮಯ್ಯ ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ: ಸಚಿವ ಈಶ್ವರಪ್ಪ - Minister Iswarappa
ಸಿದ್ದರಾಮಯ್ಯ ಕುರುಬ ಸಮಾವೇಶಕ್ಕೆ ಬರಲಿ, ಬರದೆ ಇರಲಿ. ಪಾದಯಾತ್ರೆ ಯಶಸ್ವಿಯಾದ ನಂತರ ಜಗದ್ಗುರು ಮಾಡಿರುವಂತಹ ಪಾದಯಾತ್ರೆಗೆ ಆರ್ಎಸ್ಎಸ್ ದುಡ್ಡು ಕೊಟ್ಟಿದೆ ಎಂಬ ಹೇಳಿಕೆಗಳು ನೋವು ತಂದಿದೆ ಎಂದು ಸಚಿವ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ ಸಚಿವರು, ಮಾರ್ಗ ಮಧ್ಯೆ ನಗರದಲ್ಲಿ ಮಾತನಾಡಿ, ಈಗ ನಡೆದಿರುವ ಕುರುಬರ ಎಸ್ಟಿ ಹೋರಾಟದಲ್ಲಿ ಯಾವುದೇ ರಾಜಕಾರಣ ಇಲ್ಲ. ಆದ್ರೆ ಅಹಿಂದ ಹೋರಾಟದಲ್ಲಿ ಸಿದ್ದರಾಮಯ್ಯ ರಾಜಕಾರಣ ಇದೆ. ಇತಿಹಾಸದಲ್ಲಿಯೇ ಜಗದ್ಗುರು ನೇತೃತ್ವದಲ್ಲಿ ರಾಜ್ಯದಲ್ಲಿ ಬೃಹತ್ ಸಮಾವೇಶ ನಡೆದಿದ್ದು, ಎಲ್ಲರೂ ಸಹಕಾರ ನೀಡಿದ್ದರು. ಅದರಂತೆ ಸಿದ್ದರಾಮಯ್ಯ ಸಹ ಸಹಕಾರ ನೀಡಿ, ಸಮಾವೇಶಕ್ಕೆ ಬರಬೇಕಿತ್ತು. ಆದರೆ ಯಾವ ಕಾರಣಕ್ಕೆ ಸಮಾವೇಶಕ್ಕೆ ಬಂದಿಲ್ಲ ಎನ್ನುವುದು ಗೊತ್ತಿಲ್ಲ. ನಮ್ಮ ಉದ್ದೇಶ ಎಸ್ಟಿ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದರು.
ಇನ್ನು ಪುಲ್ವಾಮಾ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪುಲ್ವಾಮ ದಾಳಿ ಮಾಡಿದ ದಾಳಿಕೋರರಿಗೆ ಈ ದೇಶ ಒದೆಯುತ್ತದೆ ಎನ್ನುವುದು ಗೊತ್ತಿರಲಿಲ್ಲ. ಹಿಂದಿನ ಸರ್ಕಾರಗಳಿದ್ದ ವೇಳೆ ದಾಳಿ ನಡೆಸಿದ ಸಂದರ್ಭದಲ್ಲಿ ಮೌನವಾಗಿದ್ದ ಹಾಗೆ ಈ ಸರ್ಕಾರವೂ ಇರುತ್ತದೆ ಎಂದು ಭಾವಿಸಿದ್ದರು. ಆದರೆ ನಮ್ಮ ಸರ್ಕಾರ ಒಂದೇ ರಾತ್ರಿಯಲ್ಲಿ ಅವರ ತಾಣಗಳಿಗೆ ನುಗ್ಗಿ ಧ್ವಂಸ ಮಾಡಿ ಉಗ್ರಗಾಮಿಗಳ ಭ್ರಮೆ ಕಳಚಿ, ತಕ್ಕ ಉತ್ತರ ನೀಡಿದೆ ಎಂದರು. ಆಗಿನಿಂದ ಇಂದಿನವರೆಗೂ ಪಾಕಿಸ್ತಾನದ ಉಗ್ರಗಾಮಿಗಳು ಭಾರತದ ಕಡೆ ಮುಖ ಮಾಡಿಲ್ಲ ಎಂದರು.