ಕರ್ನಾಟಕ

karnataka

ETV Bharat / state

ಕೋಲಾರ: ಪೆಟ್ರೋಲ್​​ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆ - driving school owner commited suicide

ಕೆಲವು ದಿನಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ಜರುಗಿದೆ.

driving school owner commits suicide
ವ್ಯಕ್ತಿ ಆತ್ಮಹತ್ಯೆ

By

Published : Jan 4, 2021, 7:23 PM IST

ಕೋಲಾರ: ಕಠಾರಿಪಾಳ್ಯ ನಿವಾಸಿ ನವೀನ್​ ಕುಮಾರ್​ ಎಂಬಾತ ನಗರದ ಹೊರವಲಯದ ಎಸ್​ಡಿಸಿ ಕಾಲೇಜು ಬಳಿಯ ಕೋಲಾರಮ್ಮ ಕೆರೆಯಲ್ಲಿ ಪೆಟ್ರೋಲ್​​ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವ್ಯಕ್ತಿ ಆತ್ಮಹತ್ಯೆ

ಇದನ್ನು ಕಂಡ ಸ್ಥಳೀಯರೊಬ್ಬರು ಕೋಲಾರ ನಗರ ಪೊಲೀಸ್​ ಠಾಣೆಗೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ. ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಈ ಸಾವಿನ ಬಗ್ಗೆ ಅನುಮಾನ ಮೂಡಿದ ಕಾರಣ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ನಂತರ ಅವರ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಿದ ಬಳಿಕ ಇದು ಆತ್ಮಹತ್ಯೆ ಎಂಬುದು ಖಾತ್ರಿಯಾಗಿದೆ.

ನವೀನ್​ ಕೋಲಾರದಲ್ಲಿ ಮಂಜುನಾಥ ಡ್ರೈವಿಂಗ್​ ಸ್ಕೂಲ್​ ನಡೆಸುತ್ತಿದ್ದ. ಕಳೆದ ಏಳೆಂಟು ವರ್ಷಗಳಿಂದ ಸ್ವಲ್ಪ ಮಾನಸಿಕ ರೋಗಕ್ಕೆ ತುತ್ತಾಗಿದ್ದ ನವೀನ್,​ ಆಗಾಗ ಯಾರಿಗೂ ಹೇಳದೆ ಎಲ್ಲೆಂದರಲ್ಲಿ ಹೋಗುತ್ತಿದ್ದನಂತೆ. ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದನಂತೆ. ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ನಿನ್ನೆ ನವೀನ್​ ಅತ್ತೆ ಮೃತಪಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ ನವೀನ್,​ ಇಂದು ಬೆಳಗ್ಗೆ ಎದ್ದು ತಮ್ಮ ಬೈಕ್​ನಲ್ಲಿ ಕೋಲಾರಮ್ಮ ಕೆರೆಗೆ ಬಂದು ಯಾರೂ ಇಲ್ಲದ ವೇಳೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಇನ್ನು ಶವವನ್ನು ಕಂಡಾಗ ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬರುತ್ತಿರಲಿಲ್ಲ. ಕಾರಣ ನವೀನ್​ ತಾನು ಬೆಂಕಿ ಹಚ್ಚಿಕೊಂಡರೂ ಒದ್ದಾಡದೆ ಉಸಿರು ಬಿಗಿ ಹಿಡಿದು ಮಲಗಿದ್ದಾನೆ. ಅಷ್ಟೇ ಅಲ್ಲ ನಾಲಿಗೆಯನ್ನು ಕಚ್ಚಿಕೊಂಡಿದ್ದಾನೆ. ಇದನ್ನು ಕಂಡ ಪೊಲೀಸರಿಗೆ ಇದು ಆತ್ಮಹತ್ಯೆನಾ ಅನ್ನೋ ಅನುಮಾನ ಮೂಡಿದ್ದು, ಈ ಹಿನ್ನೆಲೆ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ರು. ಬಳಿಕ ಮೃತನ ಮಾನಸಿಕ ಸ್ಥಿತಿ ತಿಳಿದ ನಂತರ ಸಿದ್ಧನಾಗೇ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿ:ವಿಜಯನಗರ ಜಿಲ್ಲೆ ರಚನೆ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್​

ABOUT THE AUTHOR

...view details