ಕರ್ನಾಟಕ

karnataka

ETV Bharat / state

watch video... ಮೇಕೆಯೊಂದಿಗೆ ಜಿಂಕೆ ಮರಿ ಸ್ನೇಹ - ಕೋಲಾರ

ಜಿಂಕೆ ಮರಿಯೊಂದು ಮೇಕೆಯೊಂದಿಗೆ ಸ್ನೇಹಯುತವಾಗಿರುವಂತಹ ಅಪರೂಪದ ದೃಶ್ಯ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಬಳಿ ಇರುವ ಮುದುಗುಳಿ ಗ್ರಾಮದ ಬಳಿ ಕಂಡು ಬಂದಿದೆ.

kolar
ಮೇಕೆಯೊಂದಿಗೆ ಜಿಂಕೆ ಮರಿಯ ಸ್ನೇಹ

By

Published : Oct 21, 2021, 4:32 PM IST

ಕೋಲಾರ: ಕಾಡಿನಲ್ಲಿ ವಾಸ ಇರುವ ಜಿಂಕೆ ಮರಿಯೊಂದು ಹೊಲಕ್ಕೆ ಮೇಯಲು ಹೋಗುವ ಮೇಕೆಯೊಂದಿಗೆ ಸ್ನೇಹಯುತವಾಗಿರುವಂತಹ ಅಪರೂಪದ ದೃಶ್ಯ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಬಳಿ ಇರುವ ಮುದುಗುಳಿ ಗ್ರಾಮದ ಬಳಿ ಕಂಡು ಬಂದಿದೆ.

ಮೇಕೆಯೊಂದಿಗೆ ಜಿಂಕೆ ಮರಿಯ ಸ್ನೇಹ..ಅಪರೂಪದ ದೃಶ್ಯ

ಕಾಮಸಮುದ್ರ ಬಳಿ ನೂರಾರು ಎಕರೆ ಅರಣ್ಯ ಪ್ರದೇಶವಿದ್ದು, ಮದುಗುಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಜಮೀನು ಅರಣ್ಯ ಪ್ರದೇಶದ ಪಕ್ಕದಲ್ಲಿಯೇ ಇದೆ. ಇಲ್ಲಿ ಮೇಕೆಯೊಂದನ್ನ ಮೇಯಲು ಕಟ್ಟಿ ಹಾಕಿದ ಸಂದರ್ಭದಲ್ಲಿ ಜಿಂಕೆ ಮರಿಯೊಂದು ಪ್ರತಿನಿತ್ಯ ಬಂದು, ಮೇಕೆಯೊಂದಿಗೆ ಆಟವಾಡುತ್ತಾ ಕೆಲಕಾಲ ಸಮಯ ಕಳೆಯುತ್ತಿದೆ.

ಕಳೆದ ಒಂದು ವಾರದಿಂದ ಮೇಕೆಯೊಂದಿಗೆ ಸ್ನೇಹಯುತವಾಗಿ ಜಿಂಕೆ ಮರಿ ಕಾಲ ಕಳೆಯುತ್ತಿರುವ ದೃಶ್ಯಗಳು ನೋಡುಗರನ್ನ ಅಚ್ಚರಿಗೊಳಿಸಿದೆ.

ABOUT THE AUTHOR

...view details