ಕರ್ನಾಟಕ

karnataka

ETV Bharat / state

ಲಾರಿ ಅಡ್ಡಗಟ್ಟಿ 6 ಕೋಟಿ ರೂ. ಮೌಲ್ಯದ ಮೊಬೈಲ್​ಗಳ ಕಳ್ಳತನ: ಖದೀಮರಿಗೆ ಬಲೆ ಬೀಸಿದ ಪೊಲೀಸರು - ನೆರ್ನಹಳ್ಳಿ ಮೊಬೈಲ್​ ದರೋಡೆ ಪ್ರಕರಣ

ಬೆಲೆ ಬಾಳುವ ಮೊಬೈಲ್​ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು ಸುಮಾರು 6 ಕೋಟಿ ರೂ. ಮೌಲ್ಯದ ಮೊಬೈಲ್​ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಪತ್ತೆಗಾಗಿ ಬಲೆ ಬೀಸಿದ್ದಾರೆ.

6 crores valuable mobiles theft in kolar nernahalli
ಮೊಬೈಲ್​ಗಳ ಕಳ್ಳತನ

By

Published : Aug 6, 2021, 5:12 PM IST

ಕೋಲಾರ: ಲಾರಿಯನ್ನ ಅಡ್ಡಗಟ್ಟಿ ಸುಮಾರು ಆರು ಕೋಟಿ ರೂ. ಮೌಲ್ಯದ ಮೊಬೈಲ್​ಗಳನ್ನ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ನೆರ್ನಹಳ್ಳಿ ಬಳಿ ನಡೆದಿದೆ.

ಲಾರಿ ಅಡ್ಡಗಟ್ಟಿ 6 ಕೋಟಿ ರೂ. ಮೌಲ್ಯದ ಮೊಬೈಲ್​ಗಳ ಕಳ್ಳತನ

ಕಳೆದ ರಾತ್ರಿ ಮೊಬೈಲ್​​ಗಳನ್ನು ಹೊತ್ತ ಲಾರಿ ತಮಿಳುನಾಡಿನ ಕಾಂಚೀಪುರಂನಿಂದ ಬೆಂಗಳೂರಿಗೆ ಸಾಗುತ್ತಿತ್ತು. ಮುಳಬಾಗಿಲು ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ದೇವರಾಯನ ಸಮುದ್ರದ ಬಳಿ ಲಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕನನ್ನು ಥಳಿಸಿ, ಬಾಯಿಗೆ ಬಟ್ಟೆ ಇಟ್ಟು ಲಾರಿ ಸಮೇತ ಪರಾರಿಯಾಗಿದ್ದರು. ನಂತರ ನೆರ್ನಹಳ್ಳಿ ಗೇಟ್​​ ಬಳಿ ಲಾರಿಯಲ್ಲಿ ನಿಲ್ಲಿಸಿ ಇನ್ನೊಂದು ಟ್ರಕ್​​ಗೆ ಸರಕು ಸಾಗಿಸಿ ಅಲ್ಲಿಂದ ಪರಾರಿಯಾಗಿದ್ದರು.

ಇಂದು ಮದ್ಯಾಹ್ನ ಲಾರಿಯ ಬಳಿ ಹೋದ ಸಾರ್ವಜನಿಕರಿಗೆ ಚಾಲಕನನ್ನ ಕಟ್ಟಿಹಾಕಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಂ.ಐ. ಕಂಪನಿಗೆ ಸೇರಿದ ಸುಮಾರು ಆರು ಕೋಟಿ ರೂ. ಮೌಲ್ಯದ ಮೊಬೈಲ್​ಗಳು ಕಳುವಾಗಿವೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಎಸ್ಪಿ ಸೇರಿದಂತೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details