ಕೋಲಾರ: ಹಾಸನ ಜಿಲ್ಲೆಯಲ್ಲಿ ಮಂಗಗಳ ಮಾರಣಹೋಮ ಪ್ರಕರಣ ಮರೆಯುವ ಮುನ್ನವೇ ಕೋಲಾರದಲ್ಲೂ ಇಂತಹದ್ದೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಟಮಕ ಬಳಿ 16 ಮಂಗಗಳನ್ನು ಚೀಲದಲ್ಲಿ ತುಂಬಿ ರಸ್ತೆ ಬದಿ ಎಸೆದಿದ್ದಾರೆ.
ಕೋಲಾರ: 16 ಮಂಗಗಳಿಗೆ ವಿಷವುಣಿಸಿ ಕೊಂದು ರಸ್ತೆ ಬದಿ ಎಸೆದ ದುಷ್ಕರ್ಮಿಗಳು
ಹಾಸನದಲ್ಲಿ ಸುಮಾರು 40 ಮಂಗಗಳನ್ನು ವಿಷಹಾಕಿ ಕೊಂದ ಘಟನೆಯ ಬಳಿಕ ಕೋಲಾರದಲ್ಲೂ ಇಂತಹ ಘಟನೆ ನಡೆದಿದೆ. 16 ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಲಾಗಿದೆ.
16 ಮಂಗಗಳಿಗೆ ವಿಷವುಣಿಸಿ ಕೊಂದು ರಸ್ತೆ ಬದಿ ಎಸೆದ ದುಷ್ಕರ್ಮಿಗಳು
ಘಟನಾ ಸಂಬಂಧ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಕೋಲಾರ ಹೊರವಲಯದಲ್ಲಿರುವ ಮಡೇರಹಳ್ಳಿ ಅರಣ್ಯ ಇಲಾಖೆ ಕಚೇರಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಪಶು ಸಂಗೋಪನಾ ಇಲಾಖೆಯ ವೈದ್ಯರು ಸತ್ತಿರುವ ಮಂಗಗಳ ಪರಿಶೀಲಿಸಿ, ರಕ್ತದ ಮಾದರಿ ಪರೀಕ್ಷೆಗೆ ತೆಗೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ಆಹಾರದಲ್ಲಿ ವಿಷ ಹಾಕಿರಬಹುದೆಂಬ ಶಂಕಿಸಲಾಗಿದೆ. ಇನ್ನು ಅರಣ್ಯ ಸಿಬ್ಬಂದಿ ಸತ್ತಿರುವ ಮಂಗಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.