ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನ ಹಾಲಿ 10 ಶಾಸಕರು ಬಿಜೆಪಿಗೆ ಸೇರ್ತಾರೆ: ಸಚಿವ ಮುನಿರತ್ನ - ಬಿಜೆಪಿ

ಬಿಜೆಪಿಗೆ ಬರೋದಕ್ಕೆ 22 ಜನ ಕಾಂಗ್ರೆಸ್ ನಾಯಕರು ರೆಡಿ ಇದ್ದಾರೆ. ಅದರಲ್ಲಿ ನಾವು 10 ಜನರನ್ನು ಆಯ್ಕೆ ಮಾಡಿಕೊಂಡು ಸೇರಿಸಿಕೊಳ್ತಿದ್ದೇವೆ ಎಂದು ಕೋಲಾರದಲ್ಲಿ ಸಚಿವ ಮುನಿರತ್ನ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Inauguration of BJP's new office
ಸಚಿವ ಮುನಿರತ್ನ

By

Published : Dec 15, 2022, 2:01 PM IST

ತೋಟಗಾರಿಕೆ ಸಚಿವ ಮುನಿರತ್ನ

ಕೋಲಾರ:ಕಾಂಗ್ರೆಸ್‌ನ ಹಾಲಿ 10 ಶಾಸಕರು ಬಿಜೆಪಿಗೆ ಸೇರ್ತಿದ್ದಾರೆ ಕಾದುನೋಡಿ ಎಂದು ಕೋಲಾರದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಹೊಸ ಬಾಂಬ್​ ಸಿಡಿಸಿದ್ದಾರೆ. ಕೋಲಾರ ಹೊರ ವಲಯದ ಕೋಗಿಲಹಳ್ಳಿ ಬಳಿ ಬಿಜೆಪಿ ನೂತನ ಕಚೇರಿಯ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಬರೋದಕ್ಕೆ 22 ಜನ ಕಾಂಗ್ರೆಸ್ ನಾಯಕರು ರೆಡಿ ಇದ್ದಾರೆ. ಅದರಲ್ಲಿ ನಾವು 10 ಜನರನ್ನು ಆಯ್ಕೆ ಮಾಡಿಕೊಂಡು ಸೇರಿಸಿಕೊಳ್ತಿದ್ದೇವೆ ಎಂದು ಹೇಳಿದರು.

ಇಬ್ಬರು ಮೂವರು ನಾಯಕರು ಒಟ್ಟಾಗಿ ಕೆಲಸ ಮಾಡಿದ್ರೂ, ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಪಕ್ಷದವರೇ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಆಗ್ತಿದ್ದಾರೆ. ಬಿಜೆಪಿಯಿಂದ ಸಾಕಷ್ಟು ಜನರು ಕಾಂಗ್ರೆಸ್​​ಗೆ ಬರುತ್ತಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ಬಿಜೆಪಿ ಸೇರಲು ಹಣದ ಆಮಿಷ.. ಬಾಂಬೆ ಡೈರಿಯ ಮೊದಲ ಅಧ್ಯಾಯ ಬಿಚ್ಚಿಟ್ಟ ಹೆಚ್ ​ವಿಶ್ವನಾಥ್

ಸರ್ಕಾರ ಇತ್ತು, ಎಲ್ಲವೂ ಅವರದೇ ನಡೆಯುತ್ತಿದ್ದಾಗಲೇ ನಮ್ಮನ್ನ ಹಿಡಿಯಕ್ಕಾಗಿಲ್ಲ. 17 ಜನ ನಮ್ಮನೇ ಅವರು ಹಿಡಿಯಲು ಆಗಿಲ್ಲ,. ಇನ್ನೂ ನಮ್ಮಲ್ಲಿರುವುವರನ್ನ ಅವರು ಕರೆದುಕೊಳ್ಳೋಕೆ ಆಗುತ್ತಾ ಎಂದು ಟಾಂಗ್ ನೀಡಿದ್ರು.

ನಾಳೆ ಕೋಲಾರ ಬಂದ್ ವಿಚಾರವಾಗಿ ಮಾತನಾಡಿದ ಅವರು, ಜನರು ಆಯ್ಕೆ ಮಾಡಿಕೊಳ್ಳುವ ಶಾಸಕರು ಅಂತಹವರು ನಾವೇನು ಮಾಡೋದು. ಅವರೆಲ್ಲಾ ಬರಿ ರಾಜಕಾರಣಕ್ಕೆ ಸೀಮಿತರಾಗಿದ್ದಾರೆ. ಅವರಿಗೆ ರಸ್ತೆಗಳು, ಅಭಿವೃದ್ದಿ ಬೇಕಾಗಿಲ್ಲ ಎಂದರು.

ABOUT THE AUTHOR

...view details