ಕೊಡಗು:ಪತ್ನಿ ಹಾಗೂ ಮಗಳು ಸೇರಿ ನ್ಯಾಯಾಲಯದಲ್ಲಿ ಸುಳ್ಳು ಅತ್ಯಾಚಾರದ ಆರೋಪ ಹೊರಿಸಿದ್ದರಿಂದ ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕ ಗ್ರಾಮದ ನಿವಾಸಿ ಭರತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.
ಸುಮಾರು 20 ವರ್ಷಗಳ ಹಿಂದೆ ರತ್ನ ಎಂಬುವರನ್ನ ವಿವಾಹವಾಗಿದ್ದ ಭರತ್ ಸಂಸಾರ ಚೆನ್ನಾಗಿಯೆ ಇತ್ತು. ಇಬ್ಬರು ಹೆಣ್ಣು ಮಕ್ಕಳಿದ್ದು, ಒಟ್ಟಿಗೆ ಆನಂದವಾಗಿದ್ದರು. ಆದರೆ ಮಕ್ಕಳು ದೊಡ್ಡವರಾದಂತೆ ಪತಿ-ಪತ್ನಿಯ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ಈ ನಡುವೆ ಪತ್ನಿ, ಪತಿಯೇ ಮೊದಲ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ, ಹಾಗೂ 2ನೇ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ದೂರಿನ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಭರತ್ಗೆ 14 ವರ್ಷ ಜೈಲಾಗುತ್ತದೆ. ಆದರೆ ಹೈಕೋರ್ಟ್ನಲ್ಲಿ ಭರತ್ ಮೇಲ್ಮನವಿ ಸಲ್ಲಿಸಿ ಆರೋಪ ಮುಕ್ತರಾಗಿ ಹೊರಬಂದಿರುತ್ತಾರೆ.