ಕರ್ನಾಟಕ

karnataka

ETV Bharat / state

ಲಾಕ್‌ಡೌನ್‌ ಇದ್ರೇನು ಹಾಪ್‌ಕಾಮ್ಸ್‌ನಿಂದ ಮನೆ ಮನೆಗೂ ತರಕಾರಿ.. - ಕೊಡಗು ಸುದ್ದಿ

ಎಪಿಎಂಸಿಯಿಂದಲೇ ಹಣ್ಣು-ತರಕಾರಿಗಳನ್ನು ಖರೀದಿ ಮಾಡುತ್ತಿರುವ ಹಾಪ್​ಕಾಮ್ಸ್ ಸಿಬ್ಬಂದಿ, ಎಪಿಎಂಸಿ ಬೆಲೆಯಲ್ಲೇ ಜನರಿಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯತ್‌ಗಳಿಗೆ ಎರಡು ವಾಹನಗಳಲ್ಲಿ ತರಕಾರಿ ಸರಬರಾಜು ಮಾಡಲಾಗುತ್ತಿದೆ.

Vegetable  supply to every home by Hopcoms
ದೇಶದಾದ್ಯಂತ್ ಲಾಕ್​ಡೌನ್​: ಕೊಡಗು ಜಿಲ್ಲೆಯಲ್ಲಿ ಹಾಪ್‌ಕಾಮ್ಸ್‌ನಿಂದ ಮನೆ ಮನೆಗೆ ತರಕಾರಿ

By

Published : Apr 2, 2020, 5:59 PM IST

ಕೊಡಗು:ಜಿಲ್ಲೆಯಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದ್ದಂತೆ ಇಡೀ ಜಿಲ್ಲೆಯೇ ಸಂಪೂರ್ಣ ಸ್ಥಬ್ಧವಾಗಿದ್ದು,ಕೊಡಗು ಜಿಲ್ಲಾಡಳಿತ ಹಾಪ್ ಕಾಮ್ಸ್ ನೇತೃತ್ವದಲ್ಲಿ ಮನೆ ಮನೆಗೆ ತರಕಾರಿಗಳನ್ನು ಪೂರೈಕೆ ಮಾಡುತ್ತಿದೆ.

ದೇಶದಾದ್ಯಂತ್ ಲಾಕ್​ಡೌನ್​.. ಕೊಡಗಿನಲ್ಲಿ ಮನೆ ಮನೆಗೂ ಹಾಪ್‌ಕಾಮ್ಸ್‌ ತರಕಾರಿ..

ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ಜನರಿಗೆ ಜಿಲ್ಲಾಡಳಿತವೇ ದಿನಸಿ ವಸ್ತುಗಳ ಮಾರಾಟ ಮತ್ತು ಕೊಳ್ಳುವಿಕೆಗೆ ವ್ಯವಸ್ಥೆ ಮಾಡಿಕೊಟ್ಟಿದೆ. ಹಾಗೆಯೇ ಗ್ರಾಮೀಣ ಪ್ರದೇಶದ ಜನರಿಗೂ ಅಗತ್ಯ ವಸ್ತುಗಳು ಮತ್ತು ತರಕಾರಿಗಳಿಗೆ ಸಮಸ್ಯೆ ಆಗದಂತೆ ಕೊಡಗು ಜಿಲ್ಲಾಡಳಿತ ಹಾಪ್‌ಕಾಮ್ಸ್ ನೇತೃತ್ವದಲ್ಲಿ ಮನೆ ಮನೆಗೆ ತರಕಾರಿಗಳನ್ನು ಪೂರೈಕೆ ಮಾಡುತ್ತಿದೆ.

ಎಪಿಎಂಸಿಯಿಂದಲೇ ಹಣ್ಣು-ತರಕಾರಿಗಳನ್ನು ಖರೀದಿ ಮಾಡುತ್ತಿರುವ ಹಾಪ್​ಕಾಮ್ಸ್ ಸಿಬ್ಬಂದಿ, ಎಪಿಎಂಸಿ ಬೆಲೆಯಲ್ಲೇ ಜನರಿಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯತ್‌ಗಳಿಗೆ ಎರಡು ವಾಹನಗಳಲ್ಲಿ ತರಕಾರಿ ಸರಬರಾಜು ಮಾಡಲಾಗುತ್ತಿದೆ. ಲಾಕ್​ಡೌನ್ ಆಗಿದ್ದರೂ ಗ್ರಾಮೀಣ ಭಾಗದ ಜನರು ಯಾವುದೇ ತೊಂದರೆ ಇಲ್ಲದಂತೆ ತರಕಾರಿಗಳನ್ನು ಕೊಳ್ಳುತ್ತಿದ್ದಾರೆ.

ABOUT THE AUTHOR

...view details