ಸೋಮವಾರಪೇಟೆ(ಕೊಡಗು):ಕಾಡಾನೆಗಳ ದಾಳಿಗೆ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಕೃಷ್ಣ (45) ಹಾಗೂ ಕುಶಾಲ (55) ಕಾಡಾನೆ ದಾಳಿಗೆ ಗಂಭೀರವಾಗಿ ಗಾಯಗೊಂಡ ಕುಸುಬೂರು ಗ್ರಾಮದ ನಿವಾಸಿಗಳು.
ಕೊಡಗಿನಲ್ಲಿ ಕಾಡಾನೆಗಳ ದಾಳಿ: ಇಬ್ಬರಿಗೆ ಗಂಭೀರ ಗಾಯ - ಕಾಡಾನೆ ದಾಳಿಯಿಂದ ಇಬ್ಬರಿಗೆ ಗಾಯ
ಕೊಡಗು ಸುತ್ತಮುತ್ತ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಸೋಮವಾರಪೇಟೆಯ ಕಾರೆಕೊಪ್ಪದ ಬಳಿ ಇಬ್ಬರ ಮೇಲೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಡಗಿನಲ್ಲಿ ಕಾಡಾನೆಗಳ ದಾಳಿಯಿಂದ ಇಬ್ಬರಿಗೆ ಗಂಭೀರ ಗಾಯ..!
ರಾತ್ರಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿವೆ. ಪರಿಣಾಮ ತಲೆ ಹಾಗೂ ಕೈ, ಕಾಲಿನ ಭಾಗಕ್ಕೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೆಡೆ ದಕ್ಷಿಣದ ಕೊಡಗಿನಲ್ಲಿ ಸರಣಿ ಹುಲಿ ದಾಳಿ ಪ್ರಕರಣ, ಹಾಗೆಯೇ ಕಾಡಾನೆಗಳ ದಾಳಿಯಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.