ಕರ್ನಾಟಕ

karnataka

ETV Bharat / state

ಕೊಡಗು: ವಿದ್ಯುತ್ ತಂತಿ ಸ್ಪರ್ಶಿಸಿ ಎರಡು‌ ಕಾಡಾನೆ ಸಾವು

ಕಾಫಿ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಯಹುದಿಕೇರಿ ಬಳಿ ನಡೆದಿದೆ.

two-elephants-died-in-kodagu-after-touching-an-electric-line
ಕೊಡಗು : ವಿದ್ಯುತ್ ತಂತಿ ಸ್ಪರ್ಶಿಸಿ ಎರಡು‌ ಕಾಡಾನೆ ಸಾವು

By

Published : Jul 25, 2022, 5:31 PM IST

ಕೊಡಗು : ವಿದ್ಯುತ್ ತಂತಿ ಸ್ಪರ್ಶಿಸಿ ಎರಡು‌ ಕಾಡಾನೆಗಳ ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಇಲ್ಲಿನ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಬಳಿ ಕೋಣೇರಿರ ಪ್ರಕಾಶ್ ಮಂದಣ್ಣ, ಮಂಡೆಪಂಡ ಸುಮಂತ್ ಚಂಗಪ್ಪ ಎಂಬುವವರ ತೋಟದಲ್ಲಿ ಘಟನೆ ಈ ನಡೆದಿದೆ.
ವಿದ್ಯುತ್ ತಂತಿ ಸ್ಫರ್ಶಿಸಿ ಒಂದು ಗಂಡಾನೆ ಮತ್ತು ಒಂದು‌ ಹೆಣ್ಣಾನೆ ಸಾವನಪ್ಪಿದ್ದು, ಕಾಫಿತೋಟದಲ್ಲಿ ಹಾದು ಹೋಗಿದ್ದ 11 ಕೆ.ವಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಕೊಡಗು : ವಿದ್ಯುತ್ ತಂತಿ ಸ್ಪರ್ಶಿಸಿ ಎರಡು‌ ಕಾಡಾನೆ ಸಾವು

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಆಹಾರ ಅರಸಿ ಬರುವ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುವುದರ ಜೊತೆಗೆ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ತುಳಿದು ಸಾಯಿಸಿರುವ ಘಟನೆಗಳು ನಡೆದಿವೆ. ಕೆಲವು ಸಂದರ್ಭಗಳಲ್ಲಿ ಕಾಫಿ ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ಸ್ಫರ್ಶಿಸಿ ಕಾಡಾನೆಗಳು ಬಲಿಯಾಗುತ್ತಿವೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ 10 ಕ್ಕೂ ಹೆಚ್ಚು ಆನೆಗಳು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಆನೆಗಳನ್ನು ಅರಣ್ಯ ಇಲಾಖೆ ತಡೆಯದಿದ್ದರೆ ಇನ್ನಷ್ಟು ಅನಾಹುತಗಳು ಸಂಭವಿಸುತ್ತವೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.

ಓದಿ :ಕೆಸರುಗದ್ದೆ ಮಧ್ಯೆ ಕೆಸರಿನೋಕುಳಿ.. ಸಾಹಸಮಯ ಆಟಗಳಲ್ಲಿ ಮಿಂದೆದ್ದ ಸ್ಪರ್ಧಿಗಳು

ABOUT THE AUTHOR

...view details