ಕೊಡಗು:ದುಬಾರೆ ಆನೆ ಕ್ಯಾಂಪ್ ವೀಕ್ಷಿಸಲು ಸಮಯ ಮೀರಿದ ಹಿನ್ನೆಲೆಯಲ್ಲಿ ಕ್ಯಾಂಪ್‌ಗೆ ಕರೆದೊಯ್ಯದ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ.
ದುಬಾರೆ ಆನೆ ಕ್ಯಾಂಪ್‌ಗೆ ಕರೆದೊಯ್ಯಲು ನಿರಾಕರಣೆ: ಸಿಬ್ಬಂದಿ ಮೇಲೆ ಪ್ರವಾಸಿಗರ ಹಲ್ಲೆ..! - kodagu latest crime news
ಸಮಯ ಮೀರಿದ ಹಿನ್ನೆಲೆ ಪ್ರವಾಸಿಗರು ದುಬಾರೆ ಆನೆ ಕ್ಯಾಂಪ್ ವೀಕ್ಷಿಸಲು ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಪ್ರವಾಸಿಗರು ಆನೆ ಕ್ಯಾಂಪ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರ ನೋಡಲು ಮಂಗಳೂರಿನಿಂದ ಬಸ್‌ನಲ್ಲಿ ಬಂದಿದ್ದ ಪ್ರವಾಸಿಗರ ತಂಡ ಸಾಕಾನೆ ಶಿಬಿರಕ್ಕೆ ಹೋಗಲು ಬೋಟ್ ಬೇಕು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಕೇಳಿದ್ದಾರೆ. ಅದಕ್ಕೆ ಸಿಬ್ಬಂದಿ ಸಮಯ ಮೀರಿದ ಹಿನ್ನೆಲೆ ಬೋಟ್‌ನಲ್ಲಿ ಕರೆಯೊಯ್ಯಲು ಸಿಬ್ಬಂದಿ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಪ್ರವಾಸಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಶುರುವಾದ ಜಗಳ ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ.
ಇದಕ್ಕೆ ಆಕ್ರೋಶಗೊಂಡ ಪ್ರವಾಸಿಗರು ಅರಣ್ಯ ಇಲಾಖೆಯ ದಿನಗೂಲಿ ನೌಕರರಾದ ರವಿ, ತಮ್ಮಯ್ಯ ಹಾಗೂ ರಮೇಶ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕುಶಾಲನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
kodagu latest crime news