ಕರ್ನಾಟಕ

karnataka

ETV Bharat / state

ಹೊಸ ವರ್ಷ-ವೀಕೆಂಡ್​​ಗೆ ಕೊಡಗಿನ ಕಡೆ ಮುಖ ಮಾಡಿದ ಪ್ರವಾಸಿಗರು... ಸ್ಥಳೀಯರಲ್ಲಿ ಕೊರೊನಾ ಭಯ - ದುಬಾರೆಯಲ್ಲಿ ಕಾವೇರಿ ಹೊಳೆ

ದುಬಾರೆ ಸಾಕಾನೆ ಶಿಬಿರ ನೋಡಲು ದೇಶ, ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಅಲ್ಲಿರುವ ಆನೆಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಸಾಕಾನೆ ಶಿಬಿರಕ್ಕೆ ಹೋಗಬೇಕಾದರೆ ಮೈದುಂಬಿ ಹರಿಯುವ ಕಾವೇರಿ ನದಿಯನ್ನು ಬೋಟ್ ಮೂಲಕ ದಾಟಬೇಕು. ಅದು ಕೂಡ ರೋಚಕ ಅನುಭವವೇ ಸರಿ. ಹೀಗಾಗಿ ಸಾವಿರಾರು ಪ್ರವಾಸಿಗರು ದುಬಾರೆ ಸಾಕಾನೆ ಶಿಬಿರವನ್ನು ನೋಡಲು ಮುಗಿಬೀಳುತ್ತಾರೆ.

tourist-arrivals-in-kodagu-district-news
ಕೊಡಗಿನ ಕಡೆ ಮುಖ ಮಾಡಿದ ಪ್ರವಾಸಿಗರು

By

Published : Dec 25, 2020, 10:18 PM IST

ಕೊಡಗು: ಕರ್ನಾಟಕದ ಕಾಶ್ಮೀರ ಅಂತಾನೆ ಬಿರುದಾಂಕಿತ ಇರುವ ಕೊಡಗು ನೈಸರ್ಗಿಕ ಸೌಂದರ್ಯ‌ದಿಂದ ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತದೆ. ಒಂದೆಡೆ ಕೊರೊನಾ ಎರಡನೇ ಅಲೆಯ ಆತಂಕ. ಮತ್ತೊಂದೆಡೆ ಹೊಸ ವರ್ಷ ಬರಮಾಡಿಕೊಳ್ಳಲು ಪ್ರವಾಸಿಗರು ಸಾಗರೋಪಾದಿಯಲ್ಲಿ ಸೇರುತ್ತಿದ್ದು, ವೀಕೆಂಡ್ ಹಾಗೂ ಕ್ರಿ‌ಸ್‌ಮಸ್ ರಜೆ ದಿನಗಳನ್ನು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಳೆಯುತ್ತಿದ್ದಾರೆ.

ಕೊಡಗಿನ ಕಡೆ ಮುಖ ಮಾಡಿದ ಪ್ರವಾಸಿಗರು

ಸೋಮವಾರಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ದುಬಾರೆ ಸಾಕಾನೆ ಶಿಬಿರ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಸಾವಿರಾರು ಪ್ರಯಾಣಿಕರು ತುಂಬಿ ತುಳುಕುತಿದ್ದಾರೆ. ಬಹುತೇಕ ಪ್ರವಾಸಿಗರು ಮಾಸ್ಕ್ ಧರಿಸಿದ್ದರೂ‌ ಸಾಮಾಜಿಕ ಅಂತರವನ್ನು ಮಾತ್ರ ಪಾಲಿಸುತ್ತಿಲ್ಲ.‌

ದುಬಾರೆ ಸಾಕಾನೆ ಶಿಬಿರ ನೋಡಲು ದೇಶ, ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಅಲ್ಲಿರುವ ಆನೆಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಸಾಕಾನೆ ಶಿಬಿರಕ್ಕೆ ಹೋಗಬೇಕಾದರೆ ಮೈದುಂಬಿ ಹರಿಯುವ ಕಾವೇರಿ ನದಿಯನ್ನು ಬೋಟ್ ಮೂಲಕ ದಾಟಬೇಕು. ಅದು ಕೂಡ ರೋಚಕ ಅನುಭವವೇ ಸರಿ. ಹೀಗಾಗಿ ಸಾವಿರಾರು ಪ್ರವಾಸಿಗರು ದುಬಾರೆ ಸಾಕಾನೆ ಶಿಬಿರವನ್ನು ನೋಡಲು ಮುಗಿಬೀಳುತ್ತಾರೆ.

ಓದಿ: ಇದೇ ಮೊದಲ ಬಾರಿಗೆ ಅತಿ ದೊಡ್ಡ ಕೊಳಗೇರಿ ಧಾರವಿಯಲ್ಲಿ ಶೂನ್ಯ ಕೋವಿಡ್ ಪ್ರಕರಣ!!

ಕ್ರಿಸ್​​ಮಸ್ ಹಬ್ಬ, ಭಾನುವಾರದ ರಜೆ ಸೇರಿದಂತೆ ಮೂರು ದಿನಗಳ ಕಾಲ ನಿರಂತರವಾಗಿ ರಜೆ ಇರುವುದರಿಂದ ಸಾಕಾನೆ ಶಿಬಿರ ನೋಡಲು ಸಾವಿರಾರು ಜನರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಈಗಾಗಲೇ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದರೂ ಪ್ರವಾಸಿಗರು ಕೊರೊನಾ ಹರಡಬಹುದು ಎನ್ನುವ ಸಣ್ಣ ಅಳುಕು ಕೂಡ ಇಲ್ಲದೆ ಎಲ್ಲವನ್ನು ಮರೆತು ನಿಲ್ಲುತ್ತಿದ್ದಾರೆ.

ಕಾವೇರಿ ನದಿ ದಾಟಲು ಬೋಟ್ ಏರಿದರೆ ಕನಿಷ್ಠ 12 ಜನರನ್ನು ಕರೆದೊಯ್ಯಬಹುದು. ಆದರೆ ಬೋಟ್‌ನಲ್ಲಿ ಬರೋಬ್ಬರಿ 20 ಜನರನ್ನು ಕೂರಿಸಿ ಕರೆದೊಯ್ಯಲಾಗುತ್ತಿದೆ. ಹೀಗಾಗಿ ಪ್ರವಾಸಿ ತಾಣಗಳು ಕೊರೊನಾ ಹರಡುವುದಕ್ಕೆ ರಹದಾರಿಗಳಾಗಿ ಬಿಡುತ್ತವಾ ಎನ್ನೋ ಆತಂಕ ಶುರುವಾಗಿದೆ.

ಅಷ್ಟೇ ಅಲ್ಲ ದುಬಾರೆಯಲ್ಲಿ ಕಾವೇರಿ ಹೊಳೆಯಲ್ಲಿ ನೂರಾರು ಜನರು ಜಲ ಕ್ರೀಡೆಗಳನ್ನು ಆಡುತ್ತಿದ್ದಾರೆ. ನೀರೊಳಗೆ ಬಿದ್ದು ಹೊರಳಾಡುತ್ತಿರುವುದು ಕೊರೊನಾ ಹರಡುವುದಕ್ಕೆ ಸುಲಭವಾದ ಮಾರ್ಗವಾಗಿದೆ. ಜನರು ಮಾತ್ರ ಇದ್ಯಾವುದನ್ನೂ ಗಮನಕ್ಕೆ ಹಾಕಿಕೊಳ್ಳದೆ ಎಂಜಾಯ್ ಮಾಡುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿಯೇ ಸರಿ.

ದೇಶದಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆ ಶುರುವಾಗಿದೆ ಎನ್ನಲಾಗಿದ್ದು, ಆರೋಗ್ಯ ತಜ್ಞರು, ಸರ್ಕಾರಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಎಂದು ಹೇಳುತ್ತಿದ್ದಾರೆ.‌ ಪ್ರವಾಸಿಗರು ಮಾತ್ರ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಎಂಜಾಯ್ ಮಾಡುತ್ತಿರುವುದು ಕೊರೊನಾ ಹರಡುವುದಕ್ಕೆ ಅತ್ಯಂತ ಸರಳ ಮಾರ್ಗವಾಗಿಬಿಡುತ್ತಾ ಎನ್ನುವ ಆತಂಕ ಕಾಡುತ್ತಿದೆ.

ABOUT THE AUTHOR

...view details