ಕುಶಾಲನಗರ (ಕೊಡಗು):ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಕುಶಾಲನಗರ ಸಮೀಪದ ಅರಗಲ್ಲು ಗ್ರಾಮದ ಕಾಲುವೆಯಲ್ಲಿ ನಡೆದಿದೆ.
ತೊರೆನೂರಿನ ದೊಡ್ಡಕಾಲುವೆ ಬಳಿ ದುರ್ಘಟನೆ ನಡೆದಿದ್ದು, ಮೃತರನ್ನು ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕರ ಮಕ್ಕಳಾದ ವಿನಯ್, ವಿಜಯ್ ಹಾಗೂ ದೀಕ್ಷಾ ಎನ್ನಲಾಗಿದೆ. ತಾಯಿ ಚೆನ್ನಮ್ಮ(28) ಮೃತದೇಹ ಪತ್ತೆಯಾಗಿಲ್ಲ. ಎರಡು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿನ ಮೃತದೇಹಗಳು ತೇಲಿ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಶವಗಳನ್ನು ಮೇಲೆಕ್ಕೆ ಎತ್ತಿದ್ದಾರೆ.