ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿಗೆ ವೃದ್ಧ ಬಲಿ: ಕೊಡಗಿನಲ್ಲಿ ‌ಮೂರಕ್ಕೇರಿದ ಮೃತರ ಸಂಖ್ಯೆ

ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ನಿವಾಸಿ (77) ವರ್ಷದ ವೃದ್ಧ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ.‌

kodagu
ಕೊರೊನಾ ಸೋಂಕಿಗೆ ವೃದ್ಧ ಬಲಿ

By

Published : Jul 12, 2020, 7:22 PM IST

ಕೊಡಗು: ಕೊರೊನಾ ಸೋಂಕಿಗೆ ಮತ್ತೋರ್ವ ವೃದ್ಧರು ಬಲಿಯಾಗಿರುವ ಘಟನೆ ಮಡಿಕೇರಿಯ ಜಿಲ್ಲಾ ಕೋವಿಡ್​ ಆಸ್ಪತ್ರೆಯಲ್ಲಿ ನಡೆದಿದೆ.

ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ನಿವಾಸಿ (77) ವರ್ಷದ ವೃದ್ಧರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.‌ ತೀವ್ರ ಕಿಡ್ನಿ ಸಮಸ್ಯೆ ಹಾಗೂ‌ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಜಿಲ್ಲಾ ಕೋವಿಡ್​ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಸರ್ಕಾರದ ನಿಯಮಾನುಸಾರ ನಾಳೆ ಮೃತರ ಅಂತ್ಯಕ್ರಿಯೆ ನೆರವೇರಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಇನ್ನು ಜಿಲ್ಲೆಯಲ್ಲಿ ಇದುವರೆಗೆ 169 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 92 ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 74 ಸಕ್ರಿಯ ಪ್ರಕರಣಗಳು ಜಾರಿಯಲ್ಲಿವೆ. ಒಟ್ಟು ಮೂವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 68 ಕ್ಕೇರಿದೆ.‌

ABOUT THE AUTHOR

...view details