ಕೊಡಗು: ಮಡಿಕೇರಿಯ ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕೊಡಗು ಜಿಲ್ಲಾ ನ್ಯಾಯಾಲಯ ಮತ್ತು ನ್ಯಾಯಾಧೀಶರ ಕೊಠಡಿ ಮತ್ತಿತರ ಕೊಠಡಿಗಳ ಉದ್ಘಾಟನೆಯನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎ. ಎಸ್ ಬೋಪಣ್ಣ ಹಾಗೂ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ನ್ಯಾಯಾಲಯದಲ್ಲಿ ನವೆಂಬರ್ 14 ರಿಂದ ಕಾರ್ಯಕಲಾಪ ಆರಂಭವಾಗಲಿದೆ.
ಇತ್ತೀಚಿಗೆ ನ್ಯಾಯಾಲಯಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ನ್ಯಾಯಾಂಗದ ಬಗ್ಗೆ ಹೆಚ್ಚು ಆಸಕ್ತಿಯನ್ನು ಸರ್ಕಾರ ತೋರುತ್ತಿದೆ. ನಾವು ಜಿಲ್ಲಾ ನ್ಯಾಯಾಧೀಶರಾಗಿ ಈ ಹಿಂದೆ ಅನುಭವಿಸಿದ್ದಕ್ಕಿಂತ ಈಗ ಸೌಲಭ್ಯ ಹೆಚ್ಚಿದೆ. ನಾನು ರಾಜ್ಯ ಹೈಕೋರ್ಟಿನಲ್ಲಿ ಮೂಲ ಸೌಕರ್ಯದ ಮುಖ್ಯಸ್ಥನಾಗಿ ಇದ್ದಾಗ ಸರ್ಕಾರಕ್ಕೆ , ನ್ಯಾಯಾಲಯಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕಡತಗಳನ್ನು ಕಳುಹಿಸಿ ಕೊಟ್ಟಿದ್ದೆ.