ಕರ್ನಾಟಕ

karnataka

By

Published : Aug 21, 2019, 5:34 PM IST

ETV Bharat / state

ಕೊಡಗಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನ ವೀಕ್ಷಿಸಿದ ಸಚಿವ ಸುರೇಶ್ ಕುಮಾರ್..

ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಲಿಹುದಿಕೇರಿ,ಸಿದ್ದಾಪುರ ಹಾಗೂ ತೋರಾ ಗ್ರಾಮಗಳಿಗೆ ನೂತನ ಸಚಿವ ಎಸ್.ಸುರೇಶ್ ಕುಮಾರ್​ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಸಂತ್ರಸ್ತ ಕುಟುಂಬಗಳನ್ನು ಶಾಶ್ವತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ರು.

ಕೊಡಗಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನ ವಿಕ್ಷೀಸಿದ ನೂತನ ಸಚಿವ ಸುರೇಶ್ ಕುಮಾರ್

ಕೊಡಗು:ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಲಿಹುದಿಕೇರಿ,ಸಿದ್ದಾಪುರ ಹಾಗೂ ತೋರಾ ಗ್ರಾಮಗಳಿಗೆ ನೂತನ ಸಚಿವ ಎಸ್.ಸುರೇಶ್ ಕುಮಾರ್​ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.

ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳನ್ನ ವೀಕ್ಷಿಸಿದ ಸಚಿವ ಸುರೇಶ್ ಕುಮಾರ್..

ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ಸಮಸ್ಯೆಗಳನ್ನು ಆಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪದೇಪದೆ ಉಂಟಾಗುತ್ತಿರುವ ಪ್ರವಾಹ ಪೀಡಿತ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ನದಿ ತೀರದಲ್ಲಿರುವ ಕುಟುಂಬಗಳನ್ನು‌ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್‌ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಭಾಗದಲ್ಲಿ ಪದೇಪದೆ ಪ್ರವಾಹ ಉಂಟಾಗುತ್ತಿದ್ದು,ಅವರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸುವ ಬದಲು ಅವರಿಗೆ ಸೂಕ್ತ ನೆಲೆ ಒದಗಿಸಬೇಕಿದೆ. ಒಂದೆಡೆ 110 ಮತ್ತೊಂದೆಡೆ ಸುಮಾರು 80 ಸಂತ್ರಸ್ತ ಕುಟುಂಬಗಳನ್ನು ಶಾಶ್ವತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸರ್ಕಾರ ಚಿಂತಿಸಿದ್ದು, ಈಗಾಗಲೇ ಅಧಿಕಾರಿಗಳು ಸುರಕ್ಷಿತ ಸ್ಥಳಗಳನ್ನ ಗುರುತಿಸಿದ್ದಾರೆ ಎಂದರು.

ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರಿಗೆ 10 ಸಾವಿರ ನೀಡಲು ಸರ್ಕಾರ ನಿರ್ಧರಿಸಿದೆ. ಉಳಿದವರಿಗೆ ಎರಡು ದಿನಗಳ ಒಳಗೆ ಪರಿಹಾರ ವಿತರಿಸಲಾಗುವುದು. ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಎಂದು ಬರೆದು ಕೊಟ್ಟಿರುವ ನಿರಾಶ್ರಿತರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದರು. ನಿನ್ನೆಯಷ್ಟೇ ಸಚಿವ ಸಂಪುಟ ರಚನೆಯಾಗಿದ್ದು,ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಾಗಿರುವ ರಾಜ್ಯದ 12 ಜಿಲ್ಲೆಗಳಲ್ಲಿ ಎರಡು ದಿನ ಪ್ರವಾಸ ಕೈಗೊಂಡು ವಾಸ್ತವ ವರದಿ ಸಲ್ಲಿಸುವಂತೆ ಸಚಿವರಿಗೆ ಸಿಎಂ ಸೂಚಿಸಿದ್ದಾರೆ. ಅದರಂತೆ ನಾನೂ ಇಲ್ಲಿಗೆ ಭೇಟಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದ್ದೇನೆ. ಈಗಾಗಲೇ ಕೇಂದ್ರದ ಗೃಹ ಹಾಗೂ ಹಣಕಾಸು ಸಚಿವರು ರಾಜ್ಯಕ್ಕೆ ಆಗಮಿಸಿ ವಾಸ್ತವ ಅಂಶಗಳನ್ನು ಮನಗಂಡಿದ್ದಾರೆ ಎಂದರು.

ABOUT THE AUTHOR

...view details