ಕೊಡಗು: ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ನಿನ್ನೆಯಿಂದ ಬಸ್ ಸಂಚಾರ ಶುರುವಾಗಿದೆ. ಈ ನಡುವೆ ಕೊರೊನಾ ಕೂಡ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಆದರೂ ಜನರು ಮಾತ್ರ ಕ್ಯಾರೇ ಎನ್ನದೆ ಬೆಂಗಳೂರು ತಲುಪಲು ನೂಕುನುಗ್ಗಲಿನಲ್ಲಿ ಬಸ್ ಹತ್ತುತ್ತಿದ್ದಾರೆ.
ಬಸ್ ಹತ್ತಲು ಮುಗಿಬಿದ್ದ ಪ್ರಯಾಣಿಕರು: ಪಾಲನೆಯಾಗದ ಸಾಮಾಜಿಕ ಅಂತರ
ಲಾಕ್‌ಡೌನ್ ಸಡಿಲಿಕೆ ಆಗಿದೆ. ಬಸ್ ಸಂಚಾರ ನಿನ್ನೆಯಿಂದ ಶುರುವಾಗಿದ್ದು, ಕೊಡಗಿನಲ್ಲಿ ಬಸ್ ಹತ್ತಲು ಜನ ಮುಗಿಬಿದ್ದಿದ್ದಾರೆ.
ಮಡಿಕೇರಿ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ದಿನವೊಂದಕ್ಕೆ 10 ಬಸ್ಗಳನ್ನು ಬಿಡಲಾಗಿದೆ. ಆದರೂ ಜನರು ಮಾತ್ರ ಬಸ್ ಹತ್ತಲು ನಾ ಮುಂದು ತಾ ಮುಂದು ಎಂದು ನುಗ್ಗುತ್ತಿದ್ದಾರೆ. ಇಷ್ಟೊಂದು ನೂಕುನುಗ್ಗಲು ಇದ್ದರೂ ಕೆಎಸ್ಆರ್ಟಿಸಿ ಸಿಬ್ಬಂದಿ ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನೋ ಹಾಗೆ ಇದ್ದಾರೆ ಎನ್ನಲಾಗಿದೆ. ವಿವಿಧ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬರುವವರನ್ನು ನಿಲ್ದಾಣದ ಮುಂಭಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಇದನ್ನು ಬಿಟ್ಟರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಷಯಕ್ಕೆ ಯಾರೂ ಕೂಡ ಗಮನ ಹರಿಸುತ್ತಿಲ್ಲ ಎನ್ನಲಾಗಿದೆ. ಇದರಿಂದ ಕೊರೊನಾ ಮತ್ತೆ ಕೊಡಗು ಜಿಲ್ಲೆಗೆ ವಕ್ಕರಿಸಿ ಬಿಡುತ್ತಾ ಎನ್ನುವ ಆತಂಕ ಶುರುವಾಗಿದೆ.