ಕೊಡಗು: ಗಾಂಜಾ ಮಾರಾಟ ಮಾಡುತ್ತಿದ್ದ 12 ಆರೋಪಿಗಳನ್ನು ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದರು.
ಆನ್‌ಲೈನ್ ಪಾಸ್ ಬಳಸಿ ಗಾಂಜಾ ಮಾರಾಟ: ಕೊಡಗಿನಲ್ಲಿ 12 ಆರೋಪಿಗಳ ಬಂಧನ - ಗಾಂಜಾ ಮಾರಾಟ ಪ್ರಕರಣ
ಆನ್‌ಲೈನ್ ಪಾಸ್ ಬಳಸಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನ ಆರೋಪಿಗಳನ್ನು ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಮೇಲೆ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬ ಆರೋಪವಿದೆ.
ಆನ್‌ಲೈನ್ ಪಾಸ್ ಬಳಸಿ ಗಾಂಜಾ ಮಾರಾಟ: ಕೊಡಗಿನಲ್ಲಿ 12 ಜನರ ಬಂಧನ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಜಾ ಮಾರಾಟ ಮಾಡುತ್ತಿದ್ದ ನಿಸಾರ್ ಅಹ್ಮದ್, ಸಾಧಿಕ್ ಸೇರಿ 12 ಆರೋಪಿಗಳನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ 9 ಕೆ.ಜಿ. ಗಾಂಜಾ ವಶಡಿಸಿಕೊಳ್ಳಲಾಗಿದೆ ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಆನ್‌ಲೈನ್ ಪಾಸ್ ಬಳಸಿ ಗಾಂಜಾ ಸರಬರಾಜು ಮಾಡಿ, ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.