ಕೊಡಗು: ಕೊರೊನಾ ವೈರಸ್ ಇಡೀ ರಾಜ್ಯದೆಲ್ಲೆಡೆ ಭೀತಿಯ ಕಾರ್ಮೋಡ ಸೃಷ್ಠಿಸಿದೆ. ಜನತೆ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರ ಕಾಶಿ ಕೊಡಗಿನಲ್ಲಿ ಸಿಎಂ ಸೂಚನೆಗೂ ಮುನ್ನವೇ ಹೋಂ ಸ್ಟೇ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ.
'ಲಾಭಕ್ಕಿಂತ ಜನರ ಆರೋಗ್ಯ ಮುಖ್ಯ': ಸ್ವಯಂಪ್ರೇರಿತವಾಗಿ ಹೋಂ ಸ್ಟೇ ಬಂದ್ ಮಾಡಿದ ಮಾಲೀಕರು
COVID-19ನ ಭೀತಿಯಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಹೋಂ ಸ್ಟೇಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಸಿಎಂ ಸೂಚನೆಗೂ ಮೊದಲೇ ಹೋಂ ಸ್ಟೇಗಳಲ್ಲಿ ಸ್ವಯಂ ಪ್ರೇರಿತ ಬಂದ್..!
ಕೊಡಗಿನಲ್ಲಿ ಶೇ 70% ಹೋಂ ಸ್ಟೇಗಳನ್ನು ಮುಚ್ಚಲಾಗಿದ್ದು, ಲಾಭಕ್ಕಿಂತ ನಾಡಿನ ಜನರ ಆರೋಗ್ಯ ಮುಖ್ಯ ಎಂದು ಜಿಲ್ಲೆಯ ಹೋಂ ಸ್ಟೇ ಮಾಲೀಕರು ತಿಳಿಸಿದ್ದಾರೆ.