ಕರ್ನಾಟಕ

karnataka

ETV Bharat / state

ಹಿಂದೂ ಕಾರ್ಯಕರ್ತರಿಗೆ ಬಂದೂಕು ತರಬೇತಿ: ಎಸ್​ಡಿಪಿಐ, ಪಿಎಫ್​ಐ ಆಕ್ರೋಶ

ಯಾರನ್ನು ಕೊಲ್ಲಲು ಹಿಂದೂ ಕಾರ್ಯಕರ್ತರಿಗೆ ತ್ರಿಶೂಲ, ಬಂದೂಕು ತರಬೇತಿ ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಮಂಗಳೂರು, ಕೊಡಗು ಭಾಗದಲ್ಲಿ ತರಬೇತಿ ಪಡೆದಿದ್ದರು ಎಂಬ ಆರೋಪವಿದೆ. ಈಗ ಬಂದೂಕು ತರಬೇತಿ ಕೊಟ್ಟಿರುವುದು ಯಾರನ್ನು ಕೊಲ್ಲುವುದಕ್ಕೆ? ಎಂದು ಎಸ್​ಡಿಪಿಐ, ಪಿಎಫ್​ಐ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಎಸ್ ಡಿ ಪಿ ಐ ಕಾರ್ಯಕರ್ತ ಉಸ್ಮಾನ್
ಎಸ್ ಡಿ ಪಿ ಐ ಕಾರ್ಯಕರ್ತ ಉಸ್ಮಾನ್

By

Published : May 18, 2022, 8:43 AM IST

ಕೊಡಗು: ಜಿಲ್ಲೆಯಲ್ಲಿ ಶೌರ್ಯ ಪ್ರಶಿಕ್ಷಣ ವರ್ಗ 2022 ಹೆಸರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ತರಬೇತಿಯಲ್ಲಿ ಭಾಗವಹಿಸಿದ್ದ ಬೋಪಯ್ಯ, ಎಂಎಲ್​ಎ ಅಪ್ಪಚ್ಚು ರಂಜನ್ ಅವರ ಶಾಸಕರ ಸದಸ್ಯತ್ವ ರದ್ದು ಮಾಡುವಂತೆ ಮತ್ತು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳು ಒತ್ತಾಯಿಸಿವೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ್ ಎಜುಕೇಶನಲ್ ಸಂಸ್ಥೆಯಲ್ಲಿ ಇದೇ ತಿಂಗಳ 5 ರಿಂದ 13ರ ವರೆಗೆ ಸಂಘ ಪರಿವಾರ ಶೌರ್ಯ ಪ್ರಶಿಕ್ಷಣ ವರ್ಗ 2022 ಹೆಸರಿನಲ್ಲಿ ಹಿಂದುತ್ವ ಕಾರ್ಯಕರ್ತರಿಗೆ ಈ ತರಬೇತಿ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ ಕಾರ್ಯಕರ್ತ ಉಸ್ಮಾನ್, ಯಾರನ್ನು ಭಯಪಡಿಸಲು ಅಥವಾ ಕೊಲ್ಲಲು ಹಿಂದೂ ಕಾರ್ಯಕರ್ತರಿಗೆ ತ್ರಿಶೂಲ, ಬಂದೂಕು ತರಬೇತಿ ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಮಂಗಳೂರು, ಕೊಡಗು ಭಾಗದಲ್ಲಿ ತರಬೇತಿ ಪಡೆದಿದ್ದರು ಎಂಬ ಆರೋಪವಿದೆ. ಈಗ ಬಂದೂಕು ತರಬೇತಿ ಕೊಟ್ಟಿರುವುದು ಯಾರನ್ನು ಕೊಲ್ಲುವುದಕ್ಕೆ ಎಂದರು.


ಇದನ್ನೂ ಓದಿ:ಶಸ್ತ್ರಾಸ್ತ್ರ ತರಬೇತಿ ಪಡೆದ ಹಿಂದೂ ವಿದ್ಯಾರ್ಥಿಗಳು.. ಎಸ್​ಡಿಪಿಐ ಆಕ್ಷೇಪ

ಜಮ್ಮಾ ಹಿಡುವಳಿದಾರರ ಹಕ್ಕು ಕಸಿಯಲು ಆರ್‌ಎಸ್‌ಎಸ್ ಸಂಚು ರೂಪಿಸಿದೆ. ತರಬೇತಿ ಕೊಟ್ಟು ಗೌರಿ ಲಂಕೇಶ್, ದಾಬೂಲ್‌ಕರ್ ಹತ್ಯೆಯಾಗಿದೆ. ಭಯೋತ್ಪಾದನೆ ನಡಸಲು ಕೋಮು ಗಲಭೆ ಮಾಡಿಸಲು ಸಂಘ ಪರಿವಾರ ಭಜರಂಗದಳ ಸಂಚು ರೂಪಿಸುತ್ತಿದೆ. ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ‌ ಪೊನ್ನಪೇಟೆ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ದೂರು ನೀಡಿದ್ದಾರೆ.

ಇದನ್ನೂ ಓದಿ:ಬಂದೂಕು ತರಬೇತಿ ಸಮರ್ಥಿಸಿಕೊಂಡ ಕೆ ಜಿ ಬೋಪಯ್ಯ

ABOUT THE AUTHOR

...view details