ಕೊಡಗು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗರ್ಭಧಾರಿತ ಗೋಹತ್ಯೆ ಹಾಗೂ ಮಾಂಸ ಮಾರಾಟ ಪ್ರಕರಣ ಖಂಡಿಸಿ ಪಾಲಿಬೆಟ್ಟದಲ್ಲಿ ಹಿಂದೂ ಪರ ಸಂಘಟನೆ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಗೋಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಯಿಂದ ಪಂಜಿನ ಮೆರವಣಿಗೆ
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗರ್ಭಧಾರಿತ ಗೋಹತ್ಯೆ ಹಾಗೂ ಮಾಂಸ ಮಾರಾಟ ಪ್ರಕರಣ ಖಂಡಿಸಿ ಪಾಲಿಬೆಟ್ಟದಲ್ಲಿ ಹಿಂದೂ ಪರ ಸಂಘಟನೆ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಹಿಂದೂ ಪರ ಸಂಘಟನೆಯಿಂದ ಪಂಜಿನ ಮೆರವಣಿಗೆ
ಪಟ್ಟಣದಲ್ಲಿ ಸುಮಾರು 400ಕ್ಕೂ ಅಧಿಕ ಹಿಂದೂ ಪರ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿ, ಗೋ ಹತ್ಯೆ ಮಾಡುತ್ತಿರುವ ಕಟುಕರಿಗೆ ಉಗ್ರ ಶಿಕ್ಷೆ ನೀಡಬೇಕು. ಗೋ ಸಂತತಿ ರಕ್ಷಿಸಿ, ಗೋ ಹತ್ಯೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಪಂಜನ್ನು ಹಿಡಿದು ಬೃಹತ್ ಮೆರವಣಿಗೆ ನಡೆಸಿದರು.ಪ್ರತಿಭಟನಾ ಹಿನ್ನೆಲೆ ಕೊಡಗು ಜಿಲ್ಲಾ ಪೊಲೀಸರು ಮುನ್ನೆಚ್ಚರಿಕೆ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.