ಕೊಡಗು:ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕಾಣಿಸಿಕೊಳ್ಳುತ್ತಿದೆ. ಮಳೆಗಾಲ ಆರಂಭದ ಮೊದಲೇ ಬಂದ ಈ ಮಳೆ ಕೃಷಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.
ಕೊಡಗಿನಲ್ಲಿ ಅಕಾಲಿಕ ಮಳೆ ಅವಾಂತರ: ತತ್ತರಿಸಿದ ಕಾಫಿ ಬೆಳೆಗಾರರು! - ಅಕಾಲಿಕ ಮಳೆ
ಕಳೆದ ಬಾರಿಯ ಮಳೆಗೆ ಭೂ ಕುಸಿತ, ಇದೀಗ ಅಕಾಲಿಕ ಮಳೆಯಿಂದ ಕೊಡಗು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಳೆ
ಕಾಫಿ ಕೊಯ್ದು ಒಣಗಿಸಲು ಹರಡಲಾದ ಕಣದ ಮೇಲೆ ಬಿದ್ದ ಮಳೆಯ ಪರಿಣಾಮ ಸಂಪೂರ್ಣ ಫಸಲು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಎರಡು ಇಂಚು ಮಳೆಯಾಗಿದ್ದು, ಕಾರುಗುಂದ, ಬೆಟ್ಟಗೇರಿ, ಬಕ್ಕ, ನಾಪೋಕ್ಲು, ಅಯ್ಯಂಗೇರಿ ವ್ಯಾಪ್ತಿಯಲ್ಲಿ ಬಿದ್ದ ಮಳೆಗೆ ಕಾಫಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ.
ಕಳೆದ ಬಾರಿಯ ಮಳೆಗೆ ಭೂ ಕುಸಿತ, ಇದೀಗ ಅಕಾಲಿಕ ಮಳೆಯಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.