ಕರ್ನಾಟಕ

karnataka

ETV Bharat / state

ಪೋಸ್ಟ್ ​ಮ್ಯಾನ್​ ನಿರ್ಲಕ್ಷ್ಯ: ಜನರ ಕೈ ಸೇರದೆ ಕಾಡು ಪಾಲಾದ ದಾಖಲೆ ಪತ್ರಗಳು!

ಇಲ್ಲಿನ ಸೂರ್ಲಬ್ಬಿ ಅಂಚೆ ಕಚೇರಿಯ ಪೋಸ್ಟ್ ​ಮ್ಯಾನ್​​​ ಆಧಾರ್ ಕಾರ್ಡ್‌ಗಳು, ಬ್ಯಾಂಕ್ ಚೆಕ್ ಪುಸ್ತಕ, ಶಾಲಾ ದಾಖಲಾತಿಗಳು, ಎಲ್ಐಸಿ ದಾಖಲೆಗಳು, ಯೋಧರ ದಾಖಲಾತಿಗಳನ್ನು ಸಂಬಂಧಪಟ್ಟವರಿಗೆ ನೀಡದೆ ಕಾಡಿನಲ್ಲಿ ಎಸೆದಿರುವ ಆರೋಪ ಕೇಳಿ ಬಂದಿದೆ.

Postman negligence:  verious Documents found in the forest area
ಪೋಸ್ಟ್​ಮ್ಯಾನ್​ ನಿರ್ಲಕ್ಷ್ಯ: ಜನರ ಕೈ ಸೇರದೆ ಕಾಡಿನಲ್ಲಿ ದೊರೆತ ದಾಖಲೆ ಪತ್ರಗಳು

By

Published : Apr 25, 2020, 7:13 PM IST

ಕೊಡಗು: ಅಂಚೆ ಮೂಲಕ ಕಳುಹಿಸಲಾಗಿದ್ದ ಲಕೋಟೆ ಹಾಗೂ ದಾಖಲಾತಿಗಳು ಇಲಾಖೆಯಿಂದ ಸಂಬಂಧಿಸಿದವರಿಗೆ ನೀಡದೆ ಕಾಡಿನಲ್ಲಿ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಸೂರ್ಲಬ್ಬಿ ಅಂಚೆ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಪೋಸ್ಟ್ ಮ್ಯಾನ್ ಆಗಿದ್ದ ಎ.ಯು.ಮಹೇಶ್ ಎಂಬಾತನನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಪೋಸ್ಟ್​ ಮ್ಯಾನ್​ ನಿರ್ಲಕ್ಷ್ಯ: ಜನರ ಕೈ ಸೇರದೆ ಕಾಡು ಪಾಲಾದ ದಾಖಲೆ ಪತ್ರಗಳು

ಆಧಾರ್ ಕಾರ್ಡ್‌ಗಳು, ಬ್ಯಾಂಕ್ ಚೆಕ್ ಪುಸ್ತಕ, ಶಾಲಾ ದಾಖಲಾತಿಗಳು, ಎಲ್ಐಸಿ ದಾಖಲೆಗಳು, ಯೋಧರ ದಾಖಲಾತಿಗಳನ್ನು ಸಂಬಂಧಪಟ್ಟವರಿಗೆ ನೀಡದೆ ಕಾಡಿನಲ್ಲಿ ಎಸೆದಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಬಳಿಕ ಅದೇ ಗ್ರಾಮದ ನಿವಾಸಿ ಜಯಂತಿ ಎಂಬುವರಿಗೆ ಈ ದಾಖಲಾತಿಗಳು ಸಿಕ್ಕಿದ್ದು, ಈ ಮಾಹಿತಿಯನ್ನು ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸೇವಾ ಕೇಂದ್ರದ ಸಂಚಾಲಕ ತೇಲಪಂಡ ಪ್ರಮೋದ್ ಸೋಮಯ್ಯ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೋಸ್ಟ್ ಮ್ಯಾನ್ ಮಹೇಶ್ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ದಾಖಲಾತಿಗಳನ್ನು ವಿತರಣೆ ಮಾಡದೆ ಕಾಡಿನಲ್ಲಿ ಎಸೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಠಾಣಾಧಿಕಾರಿ ಶಿವಶಂಕರ್ ಆರೋಪಿಯನ್ನು ವಶಕ್ಕೆ ಪಡೆದು ನಂಬಿಕೆ ದ್ರೋಹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 2017ರಿಂದಲೂ ಹೀಗೆ ಆಗುತ್ತಿದೆ. ಆದರೂ ಜನರು ಅಂಚೆ ಇಲಾಖೆಯನ್ನು ನಂಬಿದ್ದರು. ಗ್ರಾಮದ ಅನೇಕರಿಗೆ, ಗ್ರಾಮದ ಶಾಲೆಗಳಿಗೆ ಸರ್ಕಾರದಿಂದ ಬರಬೇಕಾದ ಅನೇಕ ಪತ್ರಗಳು ಇನ್ನೂ ರವಾನೆಯಾಗಿಲ್ಲ ಎಂದು ತಿಳಿದ ಗ್ರಾಮಸ್ಥರು, ತೀವ್ರ ಆತಂಕಕ್ಕೆ ಈಡಾಗಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಬರಬೇಕಾಗಿದ್ದ ಸ್ಕಾಲರ್​​ಶಿಪ್ ಹಣವೂ ದೊರಕದೆ ಇರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರಾದ ಸನ್ನಿ ಹೇಳಿದ್ದಾರೆ. ತ್ವರಿತ ಸಂಪರ್ಕ, ಮಾಹಿತಿಗಾಗಿ ಇಂದು ಜನರು ಮೊಬೈಲ್​ಗಳನ್ನು ಬಳಸುತ್ತಿದ್ದರೂ ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ, ಗರ್ವಾಲೆಯಂತಹ ಗ್ರಾಮಗಳಲ್ಲಿ ಅಂಚೆ ಇಲಾಖೆಯನ್ನೇ ಜನರು ನಂಬಿಕೊಂಡಿದ್ದರು.

ಇಲಾಖೆ ಆರ್ಥಿಕವಾಗಿ ನಷ್ಟದಲ್ಲಿದ್ದರೂ ಗ್ರಾಮೀಣ ಸೇವೆಯನ್ನು ನಿಲ್ಲಿಸಿರಲಿಲ್ಲ. ಇನ್ನು ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details