ಕರ್ನಾಟಕ

karnataka

ETV Bharat / state

ಪ್ರವಾಹ ಪರಿಸ್ಥಿತಿ ಎದುರಿಸಲು ಕೊಡಗಿಗೆ ಬಂದಿದೆ ಎನ್‌ಡಿ‌ಆರ್‌ಎಫ್ ತಂಡ.. - madikeri flood news

ಆಂಧ್ರದಿಂದ ಆಗಮಿಸಿರುವ 10ನೇ ಬ್ಯಾಚ್‌ನ ತಂಡದಲ್ಲಿ 25 ನುರಿತ ಸಿಬ್ಬಂದಿ ಇದ್ದಾರೆ. ಈ ತಂಡ ಭೂ ಕುಸಿತ, ಪ್ರವಾಹ ಹಾಗೂ ಕಟ್ಟಡ ಧ್ವಂಸ ಸೇರಿ ಮತ್ತಿತರ ತುರ್ತು ಸನ್ನಿವೇಶಗಳಲ್ಲಿ ಸ್ಪಂದಿಸಲಿದೆ.

NDRF Team
ಎನ್‌ಡಿ‌ಆರ್‌ಎಫ್ ತಂಡ

By

Published : Jun 2, 2020, 7:11 PM IST

Updated : Jun 3, 2020, 9:19 AM IST

ಮಡಿಕೇರಿ :ಮುಂಗಾರು ಮಳೆ ಆರಂಭ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮಸ್ಯೆಗಳನ್ನು ಎದುರಿಸಲು ಎನ್‌ಡಿ‌ಆರ್‌ಎಫ್ ತಂಡವನ್ನ ಕರೆಸಲಾಯಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ ತಿಳಿಸಿದರು.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಆಂಧ್ರಪ್ರದೇಶದಿಂದ ಆಗಮಿಸಿರುವ 10ನೇ ಬ್ಯಾಚ್‌ನ ತಂಡದಲ್ಲಿ 25 ನುರಿತ ಸಿಬ್ಬಂದಿ ಇದ್ದಾರೆ. ಈ ತಂಡ ಭೂ ಕುಸಿತ, ಪ್ರವಾಹ ಹಾಗೂ ಕಟ್ಟಡ ಧ್ವಂಸ ಸೇರಿ ಮತ್ತಿತರ ತುರ್ತು ಸನ್ನಿವೇಶಗಳಲ್ಲಿ ಸ್ಪಂದಿಸಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋರಿಗೆ ಮೇರೆಗೆ ಈಗಾಗಲೇ ಈ ಎನ್‌ಡಿ‌ಆರ್‌ಎಫ್ ತಂಡ ಆಗಮಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಪ್ರಾಕೃತಿಕ ವಿಕೋಪ ಎದುರಿಸಲಿರುವ ತಂಡ ಇದಾಗಿದೆ.

ಇಂಫಾನ್ ಚಂಡ ಮಾರುತ ಕಾರ್ಯ ಮುಗಿಸಿರುವ ತಂಡ ಕಮಾಂಡಿಂಗ್ ಆಫೀಸರ್ ಆರ್‌ ಕೆ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದೆ. ರಕ್ಷಣಾ ಕಾರ್ಯಾಚರಣೆಯ ಅಗತ್ಯ ಪರಿಕರಗಳೊಂದಿಗೆ ಸಿಬ್ಬಂದಿ ಮಡಿಕೇರಿಯ ಮೈತ್ರಿ ಹಾಲ್‌ನಲ್ಲಿ ವಾಸ್ತವ್ಯ ಹೂಡಿದೆ. ಮಳೆಗಾಲದ ಕೊನೆವರೆಗೂ ಈ ತಂಡ ಜಿಲ್ಲೆಯಲ್ಲೇ ಇರಲಿದೆ ಎಂದರು.

Last Updated : Jun 3, 2020, 9:19 AM IST

ABOUT THE AUTHOR

...view details